ಕಾರಂತರು ನಕ್ಕ ಸಮಯ!

7
ಚಿತ್ರಪಟ ಕಥನ

ಕಾರಂತರು ನಕ್ಕ ಸಮಯ!

Published:
Updated:
ಕಾರಂತರು ನಕ್ಕ ಸಮಯ!

ಸದಾಕಾಲ ಗಾಂಭೀರ್ಯವನ್ನು ಆವರಿಸಿಕೊಂಡಂತೆ ಕಾಣಿಸುವ ಶಿವರಾಮ ಕಾರಂತರು ನಗುವುದನ್ನು ನೋಡಿದ್ದೀರಾ? ಇಲ್ಲಿದೆ ನೋಡಿ, ನಸುನಗುತ್ತಿರುವ ಕಾರಂತರ ಚಿತ್ರಪಟ. ಈ ಅಪರೂಪದ ನಗೆಯನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬೆರಗಿನಿಂದ ನೋಡುತ್ತಿರುವಂತಿದೆ. ಮಧ್ಯೆ ಇರುವವರು, ವಿ.ಕೃ. ಗೋಕಾಕರು.ಈ ತ್ರಿಮೂರ್ತಿಗಳು ಒಂದೇ ವೇದಿಕೆಯಲ್ಲಿ ಸೇರಿರುವುದಕ್ಕೆ ನೆಪವಾಗಿರುವುದು ಕಾರಂತರ ಹುಟ್ಟುಹಬ್ಬ. 1967ರ ಅಕ್ಟೋಬರ್‌ 10ರಂದು ಬೆಂಗಳೂರಿನಲ್ಲಿ ಶಿವರಾಮ ಕಾರಂತರ ಹುಟ್ಟುಹಬ್ಬದ ಆಚರಣೆ ನಡೆಯಿತು. ಇಲ್ಲಿನ ಚಿತ್ರಪಟ, ಐದು ದಶಕಗಳ ಹಿಂದಿನ ಕಾರ್ಯಕ್ರಮದ ಕಂಪನ್ನು ಈಗಲೂ ಬೀರುವಷ್ಟು ತಾಜಾ ಆಗಿದೆ.

– ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್‌. ರಾಮಸ್ವಾಮಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry