ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 30ಕ್ಕೂ ಹೆಚ್ಚು ಸಾವು

7

ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 30ಕ್ಕೂ ಹೆಚ್ಚು ಸಾವು

Published:
Updated:
ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 30ಕ್ಕೂ ಹೆಚ್ಚು ಸಾವು

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಯಾತ್ರಾಸ್ಥಳಕ್ಕೆ ಶುಕ್ರವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಗಳು ಬರುತ್ತಾರೆ. ಶುಕ್ರವಾರ ಬರುವ ಯಾತ್ರಿಗಳು ಶನಿವಾರ ಇಲ್ಲಿಂದ ಹಿಂದಿರುಗುತ್ತಾರೆ. ಯಾತ್ರಿಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎನ್ನಲಾಗಿದೆ.

ಯಾತ್ರಾಸ್ಥಳಕ್ಕೆ ಹೋಗಿ ಬರುವ ಮಾರ್ಗ ಅಷ್ಟು ಅನುಕೂಲಕರವಾಗಿಲ್ಲ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕರಾಚಿಗೆ ಕಳಿಸಲಾಗಿದೆ ಎಂದು ‘ಡಾನ್‌’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry