ಶುಕ್ರವಾರ, ಅಕ್ಟೋಬರ್ 23, 2020
22 °C

ಆಕ್ಸ್‌ಫರ್ಡ್‌ ವಿ.ವಿ.ಯಲ್ಲಿ ಅಧ್ಯಯನ: ಮಲಾಲ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಸ್‌ಫರ್ಡ್‌ ವಿ.ವಿ.ಯಲ್ಲಿ ಅಧ್ಯಯನ: ಮಲಾಲ ವಿಶ್ವಾಸ

ಲಂಡನ್‌/ಇಸ್ಲಾಮಾಬಾದ್ :  ಮಕ್ಕಳ ಹಕ್ಕು ಹೋರಾಟ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಅವರು ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರ, ತತ್ವಜ್ಞಾನ ಮತ್ತು ಅರ್ಥಶಾಸ್ತ್ರ ಅಧ್ಯಯನಕ್ಕೆ ಪ್ರವೇಶ ಬಯಸಿ, ಸಂದರ್ಶನ ಎದುರಿಸಿದ್ದಾರೆ.

ಪಾಕಿಸ್ತಾನದ ಪ್ರಧಾನ ಮಂತ್ರಿಯಾಗುವ ಆಶಯವನ್ನು ಮಲಾಲ ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದರು.

‘ಸಂದರ್ಶನ ಸರಳವಾಗಿರಲಿಲ್ಲ. ಇತರ ವಿದ್ಯಾರ್ಥಿಗಳಂತೆ ಫಲಿತಾಂಶವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆಂದು ಜಿಯೋ ನ್ಯೂಸ್‌ ವರದಿ ಮಾಡಿದೆ. 

ಪಾಕಿಸ್ತಾನದ ಸ್ವಾತ್‌ ಕಣಿವೆಯಲ್ಲಿ ತಾಲಿಬಾನ್‌ ಉಗ್ರರ ಅಧೀನದಲ್ಲಿದ್ದ ಸಂದರ್ಭದ ತಮ್ಮ ಅನುಭವಗಳನ್ನು ಮಲಾಲ ಅವರು, ಪತ್ರಕರ್ತ ಕ್ರಿಸ್ಟಿನಾ ಲಾಂಬಾ ಜೊತೆ ಸೇರಿ ‘ಐ ಆ್ಯಮ್‌ ಮಲಾಲ’ ಕೃತಿಯಲ್ಲಿ ದಾಖಲಿಸಿದ್ದಾರೆ. ‘ಇದು ತತ್ವಜ್ಞಾನ, ರಾಜಕೀಯಶಾಸ್ತ್ರ ಮತ್ತು ಆರ್ಥಶಾಸ್ತ್ರದ ಅಧ್ಯಯನ ಕೈಗೊಳ್ಳುವ ಆಕಾಂಕ್ಷೆಗೆ ಪ್ರೇರಣೆ ನೀಡಿತು’ ಎಂದು  ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.