ಭಾನುವಾರ, ಜೂನ್ 26, 2022
29 °C

400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್‌’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್‌’

ವಾಷಿಂಗ್ಟನ್‌: ಭೂಮಿಯ ದಟ್ಟ ವಾತಾವರಣದ ಹೊರಗೆ ಕೃತಕ ಉಪಗ್ರಹದಂತೆ ಧರೆಯನ್ನು ಪರಿಭ್ರಮಿಸುತ್ತ ವ್ಯೋಮ–ವೀಕ್ಷಣೆ ನಡೆಸುತ್ತಿರುವ ಹಬಲ್‌ ಬಾಹ್ಯಾಕಾಶ ದೂರದರ್ಶಕ ದಟ್ಟವಾದ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.

‘ಯುಜಿಸಿ 12591’ ಎಂದು ಹೆಸರಿಸಲಾಗಿರುವ ಗ್ಯಾಲಕ್ಸಿ ಮತ್ತು ಅದರ ಪ್ರಭಾವಲಯವು ಸೂರ್ಯನಿಗಿಂತ ನೂರಾರು ಕೋಟಿ ಪಟ್ಟು ಅಧಿಕ ರಾಶಿ ಹೊಂದಿದೆ. ಇದು ನಮ್ಮ ನಕ್ಷತ್ರ ಪುಂಜ ‘ಕ್ಷೀರ ಪಥ’ಕ್ಕಿಂತ ನಾಲ್ಕು  ಪಟ್ಟು  ದಟ್ಟವಾಗಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

ಈ ಗ್ಯಾಲಕ್ಸಿ ಭೂಮಿಯಿಂದ 400 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿದ್ದು, ಗಂಟೆಗೆ 1.8 ದಶಲಕ್ಷ ಕಿ.ಮೀ. ವೇಗದಲ್ಲಿ ತಿರುಗುತ್ತಿದೆ.

ನಾಸಾ ಮತ್ತು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ(ಇಎಸ್‌ಎ) ಸಹಯೋಗದ ಹಬಲ್‌ ಬಾಹ್ಯಾಕಾಶ ದೂರದರ್ಶಕವು ಸೆರೆ ಹಿಡಿದಿರುವ ಚಿತ್ರದಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ. ಗ್ಯಾಲಕ್ಸಿ ರೂಪಗೊಂಡಿರುವ ಬಗೆಗಿನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಲಿದೆ.

ಹಬಲ್‌ ಬಗೆಗೆ ಒಂದಿಷ್ಟು ಮಾಹಿತಿ:
* ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ
* ಹನ್ನೆರಡು ಟನ್‌ ತೂಕ, ಹನ್ನೆರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಹ್ಯಾಕಾಶ ದೂರದರ್ಶಕ
* ಖಗೋಳ ವಿಜ್ಞಾನಿ ‘ಎಡ್ವಿನ್‌ ಹಬಲ್‌’ (1889–1953) ಅವರ ಗೌರವಾರ್ಥ ಸಾಧನಕ್ಕೆ ಹೆಸರು
* 1990ರ ಏಪ್ರಿಲ್‌ 24 ರಂದು ಸ್ಪೇಸ್‌ ಶಟಲ್‌ ‘ಡಿಸ್ಕವರಿ’ ಮೂಲಕ ನೆಲದಿಂದ 560 ಕಿ.ಮೀ. ಎತ್ತರದಲ್ಲಿ ಭೂ ಸುತ್ತಲಿನ ಕಕ್ಷೆಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.