ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಡಕಟ್ಟುಗಳ ಅಧ್ಯಯನಕ್ಕೆ ಕ್ಷೇತ್ರ ಕಾರ್ಯ ಅಗತ್ಯ’

ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ; ‘ಬುಡಕಟ್ಟು ನೆಲಗಟ್ಟು’ ಗೋಷ್ಠಿ
Last Updated 1 ಮೇ 2017, 8:17 IST
ಅಕ್ಷರ ಗಾತ್ರ

ದಿ.ಗೋಪಾಲಕೃಷ್ಣ ಪಿ. ನಾಯಕ ವೇದಿಕೆ (ತೇರಗಾಂವ್‌, ಹಳಿಯಾಳ):  ‘ಬುಡಕಟ್ಟು ಜನಾಂಗಗಳ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಪರಿಣಾಮಕಾರಿ ಕ್ಷೇತ್ರಕಾರ್ಯ ಅಗತ್ಯ’ ಎಂದು ಪರಿಸರವಾದಿ ಶಿವಾನಂದ ಹೆಗಡೆ ಕಳವೆ ಹೇಳಿದರು.

ಉತ್ತರ ಕನ್ನಡ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ‘ಬುಡಕಟ್ಟು ನೆಲಗಟ್ಟು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬುಡಕಟ್ಟು ಜನರ ಸಂಸ್ಕೃತಿ, ಆಚಾರ–ವಿಚಾರ, ಆಹಾರ ಹಾಗೂ ಕೃಷಿ ಪದ್ಧತಿಯಲ್ಲಿ ದೊಡ್ಡ ಪರಿವರ್ತನೆ ಯಾಗಿದೆ. ಜಿಲ್ಲೆಯ ಗೌಳಿ ಜನರು ನೆರೆರಾಜ್ಯ ಗೋವಾದತ್ತ ವಲಸೆ ಹೋಗು ತ್ತಿದ್ದು, ಅವರ ನೆಲೆಗಳು ಅಲ್ಲೋಲ ಕಲ್ಲೋಲ ಆಗಿವೆ’ ಎಂದು ಹೇಳಿದರು.

‘ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಬುಡಕಟ್ಟು ಜನರು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಬದಲಾಗಿ ಅವರು ಅರಣ್ಯದಲ್ಲಿ ಸಿಗುವ ಔಷಧಯುಕ್ತ ಸಸ್ಯಗಳನ್ನೇ ಅವಲಂಬಿಸಿ ದ್ದಾರೆ. ಇಂಥ ಜನರ ಮೇಲೆ ಅಭಿವೃದ್ಧಿ ಯೋಜನೆಗಳನ್ನು ಬಲವಂತವಾಗಿ ಹೇರು ವುದು ಅಗತ್ಯವಿಲ್ಲ’ ಎಂದು ಹೇಳಿದರು.

ಕುಂಬ್ರಿ ಮರಾಠಿ ಸಮುದಾಯದ ಕುರಿತು ಮಾತನಾಡಿದ ವೆಂಕಟೇಶ ನಾಯ್ಕ, ‘ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯ ಕುಂಬ್ರಿ ಮರಾಠಿ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಚಿಂತನೆ ನಡೆಸಬೇಕು. ಜಿಲ್ಲೆಯಲ್ಲಿ ಇವರ ಜನಸಂಖ್ಯೆ ಅಂದಾಜು 22,000 ಇದೆ. ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಹೇಳಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಬುಡಕಟ್ಟು ಜನಾಂಗಗಳು ನೆಲೆಸಿದ್ದು, ಇವರ ಬಗ್ಗೆ ಹೊರ ಜಿಲ್ಲೆಯವರೇ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸರ್ಕಾರಿ ದಾಖಲೆಗಳಲ್ಲಿರುವ ಮಾಹಿತಿ ಇವೆಯೇ ಹೊರತು, ಸಮರ್ಪಕ ಕ್ಷೇತ್ರ ಅಧ್ಯಯನ ನಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಶಾಂತಿ ನಾಯಕ ಮಾತ ನಾಡಿ, ‘ಬುಡಕಟ್ಟು ಜನರು ಹೇಗಿ ದ್ದಾರೋ ಹಾಗೆಯೇ ಇರಲು ಬಿಡಿ. ಅವರು ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಾರೆ. ಹೀಗಿರುವಾಗ ಅವರ ದೇವರುಗಳಿಗೆ ರಾಜಕೀಯ ಪುಡಾರಿಗಳು ಮಂದಿರಗಳನ್ನು ನಿರ್ಮಾ ಣ ಮಾಡಿದರೆ ಪರಿಸ್ಥಿತಿ ಏನಾಗಬೇಕು?.

ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಅಧ್ಯಯನ ಆಗಬೇಕಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ವಿಕೃತಿಯನ್ನು ಸಮಾಪ್ತಿ ಗೊಳಿಸುವುದು ಅವಶ್ಯವಿದ್ದು, ಇದು ಪ್ರಸ್ತುತವೂ ಆಗಿದೆ’ ಎಂದು ಹೇಳಿದರು.

ಸಿದ್ದಿ ಸಮುದಾಯದ ಕುರಿತು ಜುಲಿಯಾನಾ ಸಿದ್ದಿ ಫರ್ನಾಂಡಿಸ್‌ ಮಾತ ನಾಡಿದರು. ಸೋಬಿನ್‌ ಎಂ.ಕಾಮ್ರೇಕರ್‌ ಬುಡಕಟ್ಟು ಜನಪದ ಹಾಡುಗಳ ಮೂಲಕ ಗಮನಸೆಳೆದರು.

‘ಪಶ್ಚಿಮಘಟ್ಟ ಸಂರಕ್ಷಣೆಯಾಗಲಿ’
‘ಅಪರೂಪದ ಜೀವವೈವಿಧ್ಯಗಳಿಗೆ ಆಶ್ರಯತಾಣವಾಗಿರುವ ಪಶ್ಚಿಮಘಟ್ಟವನ್ನು ಉಳಿಸಬೇಕಾದುದು ಎಲ್ಲರ ಕರ್ತವ್ಯ. ಹೀಗಾಗಿ ಕಸ್ತೂರಿರಂಗನ್‌ ವರದಿಗೆ ವಿರೋಧ ಮಾಡುವುದು ಬೇಡ. ಮನುಷ್ಯನ ಸ್ವಾರ್ಥಕ್ಕೆ ಕೆರೆ ಕುಂಟೆಗಳು ಒಣಗಿ ಹೋಗಿವೆ. ಹಸಿರು ಗಿಡ ಮರಗಳು ಬಲಿಯಾಗುತ್ತಿವೆ’ ಎಂದು ಸಾಹಿತಿ ಶಾಂತಿ ನಾಯಕ ಆತಂಕ ವ್ಯಕ್ತಪಡಿಸಿದರು.

*
ಬುಡಕಟ್ಟು ಜನಾಂಗಗಳ ದೇವರು ನಿರಾಕಾರ. ಕಾನನದಲ್ಲಿನ ಗಿಡ, ಮರಗಳೇ ಅವರ ಆರಾಧ್ಯ ದೈವ.
-ಶಾಂತಿ ಹೆಗಡೆ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT