ಭಾನುವಾರ, ಮಾರ್ಚ್ 26, 2023
31 °C

ವಾಲಿಬಾಲ್‌: ಪೋಸ್ಟಲ್ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿಬಾಲ್‌: ಪೋಸ್ಟಲ್ ಚಾಂಪಿಯನ್‌

ಕೋಲಾರ: ಬಬಿತಾ ಹಾಗೂ ಶ್ವೇತಾ ಅವರ ಉತ್ತಮ ಆಟದ ಬಲದಿಂದ ಪೋಸ್ಟಲ್ ತಂಡ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ಕರ್ನಾಟಕ  ವಾಲಿಬಾಲ್‌ ಲೀಗ್‌ನಲ್ಲಿ ಬುಧವಾರ ಪ್ರಶಸ್ತಿ ಗೆದ್ದಿದೆ.

ಕರ್ನಾಟಕ ವಾಲಿಬಾಲ್ ಸಂಸ್ಥೆ ವತಿ ಯಿಂದ ನಡೆದ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಪೋಸ್ಟಲ್ 25–20, 25–18 ರಲ್ಲಿ ಬೆಂಗಳೂರು ಸಿಟಿ ತಂಡವನ್ನು ಮಣಿಸಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ ಪಂದ್ಯದಲ್ಲಿ ಪೋಸ್ಟಲ್‌ 25–14, 18–25, 25–14ರಲ್ಲಿ ಮೈಸೂರು ಸ್ಪೋರ್ಟ್ಸ್‌ ಹಾಸ್ಟೆಲ್‌ ಎದುರು ಗೆದ್ದಿದೆ.

ಬಿಎಸ್‌ಎನ್‌ಎಲ್‌ಗೆ ಪ್ರಶಸ್ತಿ: ಪುರುಷರ ವಿಭಾಗದ ಪ್ರಶಸ್ತಿಯನ್ನು ಬಿಎಸ್‌ಎನ್‌ ಎಲ್ ತಂಡ ಎತ್ತಿಹಿಡಿಯಿತು.

ಫೈನಲ್‌ನಲ್ಲಿ ಈ ತಂಡ 25–22, 25–20, 28–26ರಲ್ಲಿ ಪೋಸ್ಟಲ್ ಎದುರು ಜಯದಾಖಲಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ  ಪಂದ್ಯದಲ್ಲಿ ಹೊಯ್ಸಳ 25–17, 21–25, 25–20ರಲ್ಲಿ ಸಿಕ್ಯುಎಎಲ್ ಎದುರು ಗೆದ್ದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.