ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

7

ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

Published:
Updated:
ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

1. ವಿಶ್ವವಿಖ್ಯಾತ ‘ಹಬಲ್ ಬಾಹ್ಯಾಕಾಶ ದೂರದರ್ಶಕ’ ಸೆರೆ ಹಿಡಿದಿರುವ ಅತ್ಯದ್ಭುತ ಅಂತರಿಕ್ಷ ದೃಶ್ಯವೊಂದು ಚಿತ್ರ-1 ರಲ್ಲಿದೆ. ಈ ಸುಪ್ರಸಿದ್ಧ ವ್ಯೋಮ ನಿರ್ಮಿತಿಯ ಹೆಸರೇನು ಗೊತ್ತೇ?

ಅ. 
ಮಹಾವ್ಯಾಧ ನಕ್ಷತ್ರ ಪುಂಜ

ಬ. ಸೃಷ್ಟಿಯ ಸ್ತಂಭಗಳು

ಕ. ಹದ್ದು ನೀಹಾರಿಕೆ

ಡ.  ಏಡಿ ನೀಹಾರಿಕೆ

2. ಮತ್ಸ್ಯ ವರ್ಗದ ಸುಮಾರು ಒಂಬತ್ತು ಸಾವಿರ ಪ್ರಭೇದಗಳಲ್ಲಿ ಗರಿಷ್ಠ ಗಾತ್ರದ ವಿಶ್ವ ದಾಖಲೆಯನ್ನು ಸ್ಥಾಪಿಸಿರುವ ಪ್ರಭೇದ ಚಿತ್ರ-2 ರಲ್ಲಿದೆ. ಈ ಮತ್ಸ್ಯ ಯಾವುದು?

ಅ.
  ಸಾಲ್ಮನ್

ಬ. ಗ್ರೂಪರ್

ಕ. ಸ್ಟರ್ಜನ್

ಡ. ಪರ್ಚ್

ಇ. ವೇಲ್ ಶಾರ್ಕ್

3. ಮಂಗಗಳ ಒಂದು ಪ್ರಸಿದ್ಧ ಪ್ರಭೇದ ‘ಚಪ್ಪೆ ಮೂಗಿನ ಮಂಗ’ ಚಿತ್ರ-3 ರಲ್ಲಿದೆ. ಏಷಿಯದ ಈ ಮಂಗಗಳ ನೈಸರ್ಗಿಕ ನೆಲೆ ಪ್ರಮುಖವಾಗಿ ಯಾವ ರಾಷ್ಟ್ರದಲ್ಲಿದೆ?

ಅ. ಬ್ರೆಜ಼ಿಲ್

ಬ. 
ಬರ್ಮ ( ಮಯನ್ಮಾರ್ )

ಕ.  ಶ್ರೀಲಂಕಾ

ಡ. ವಿಯಟ್ನಾಂ

ಇ. ಚೀನಾ

ಈ. ಭಾರತ

4. ಸಸ್ಯಲೋಕದ ವಿಶಿಷ್ಟ ಸೃಷ್ಟಿ ‘ಕೆಲ್ಪ್’ನ ಕೆಲ ವಿಧಗಳು ಚಿತ್ರ-4ರಲ್ಲಿವೆ. ಕೆಲ್ಪ್ ಸಸ್ಯಗಳ ಅಸ್ತಿತ್ವ ಈ ಕೆಳಗಿನ ಯಾವ ಜೀವಾವಾರಕ್ಕೆ ಸೀಮಿತವಾಗಿದೆ?

ಅ.
 ವೃಷ್ಟಿ ವನ

ಬ. ಸಾಗರಾವಾರ

ಕ. ಮರುಭೂಮಿ

ಡ. ನದೀ ತೀರ

ಇ. ಪರ್ವತ ಪ್ರದೇಶ

5. ಚಿತ್ರ ಕಲೆಯ ಆದ್ಯ ಪ್ರವರ್ತಕರಾಗಿ, ಗುಹಾ ಚಿತ್ರಗಳನ್ನು ರಚಿಸಿದ ಪ್ರಾಚೀನ ಮಾನವ ಪ್ರಭೇದ’ ಕ್ರೋಮ್ಯಾನನ್’ನ ಕಲ್ಪನಾ ಚಿತ್ರವೊಂದು ಚಿತ್ರ-5ರಲ್ಲಿದೆ. ಕ್ರೋಮ್ಯಾನನ್ ಜನ ಬದುಕಿದ್ದ ಕಾಲ ಇವುಗಳಲ್ಲಿ ಯಾವುದು ?

ಅ.
1,50,000 ವರ್ಷ ಹಿಂದೆ

ಬ. 1,00,000 ವರ್ಷ ಹಿಂದೆ

ಕ. 35,000 ವರ್ಷ ಹಿಂದೆ

ಡ. 10,000 ವರ್ಷ ಹಿಂದೆ

6. ಚಿತ್ರ-6ರಲ್ಲಿರುವ ಅತ್ಯಂತ ಪರಿಚಿತ ಹಕ್ಕಿಯನ್ನು ಗಮನಿಸಿದಿರಾ? ಈ ಹಕ್ಕಿ ಯಾವುದೆಂದು ಗುರುತಿಸಬಲ್ಲಿರಾ?

ಅ.
 ಮರಕುಟುಕ

ಬ. ಹೂಪೋ

ಕ.  ಗಿಡುಗ

ಡ. ಜುಟ್ಟಿನ ಗಿಣಿ

7. ಭಿನ್ನ ಭಿನ್ನ ಉದ್ದೇಶಗಳಿಗೆಂದು ನಿರ್ಮಿಸ ಲಾಗಿರುವ ಇಬ್ಬಗೆಯ ಬೃಹತ್ ಸಾಗರನೌಕೆಗಳು ಚಿತ್ರ 7 ಮತ್ತು 8 ರಲ್ಲಿವೆ. ಈ ನೌಕಾ ವಿಧಗಳನ್ನು  ಕೆಳಗಿನ ಪಟ್ಟಿಯಲ್ಲಿ ಪತ್ತೆ ಮಾಡುವುದು ಸಾಧ್ಯವೇ?

ವಿಮಾನ ವಾಹಕ ನೌಕೆ

. ತೈಲ ವಾಹಕ ನೌಕೆ

ಕ.  ಸರಕು ಸಾಗಾಣಿಕಾ ಹಡಗು

ಡ. ಪ್ರಯಾಣಿಕ ಹಡಗು

ಇ. ಸಮರ ನೌಕೆ

8. ಜಗತ್ಪ್ರಸಿದ್ಧ ಜ್ವಾಲಾಮುಖಿಗಳಾದ ' ಮೌನಲೋವಾ ಮತ್ತು ಕಿಲೋವಾ’ಗಳಿಂದ ನಿರಂತರ ಉಕ್ಕಿ ಪ್ರವಹಿಸುತ್ತಲೇ ಇರುವ, ಕಡಲಿಗೆ ಸುರಿಯುತ್ತಿರುವ ಶಿಲಾಪಾಕದ ವಿಸ್ಮಯದ ದೃಶ್ಯ ಚಿತ್ರ-9ರಲ್ಲಿದೆ. ಈ ಅಗ್ನಿಪರ್ವತಗಳು ಇಲ್ಲಿ ಹೆಸರಿಸಿರುವ ಯಾವ ದ್ವೀಪದಲ್ಲಿ ನೆಲೆಗೊಂಡಿವೆ ?

ಅ.
 ಹವಾಯ್

ಬ. ಗ್ಯಾಲಪಗಾಸ್

ಕ. ಈಸ್ಟರ್ ದ್ವೀಪ

ಡ. ಜಪಾನ್

ಇ. ಫಿಲಿಪ್ಪೀನ್ಸ್

9. ಬಹಳ ಬಳಕೆಯಲ್ಲಿರುವ ಒಂದು ಅತಿ ಪರಿಚಿತ, ಅತ್ಯುಪಯುಕ್ತ ಲೋಹವಾದ ‘ತಾಮ್ರ’ದ ಒಂದು ಅದಿರು ಚಿತ್ರ-10 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ತಾಮ್ರದ ಅದಿರುಗಳು ಯಾವುವು ?

ಅ. 
ಕ್ರೋಮೈಟ್

ಬ. ಸಿನಬಾರ್

ಕ. ಮ್ಯಾಲಕೈಟ್

. ಕ್ಯುಪ್ರೈಟ್

ಇ. ಗೆಲೀನಾ

ಈ. ಚಾಲ್ಕೋಸೈಟ್

. ಮ್ಯಾಗ್ನಸೈಟ್

ಟ. ಸ್ಟಿಬ್ನೈಟ್

10. ಸುಂದರ ರೂಪದ, ಆಭರಣ ಯೋಗ್ಯವೂ ಆದ ಖನಿಜವೊಂದು ಚಿತ್ರ-11 ರಲ್ಲಿದೆ. ಈ ಖನಿಜವನ್ನು ಗುರುತಿಸಬಲ್ಲಿರಾ ?

ಅ.
ಓಪಾಲ್

ಬ. ಬೆರೈಲ್

ಕ. ಟೂರ್ಮಲೀನ್

ಡ. ಅಗೇಟ್

ಇ. ಟೋಪಾಜ್

ಈ. ಕೋರಂಡಂ

11. ವಿಶ್ವವಿಖ್ಯಾತ ವಾಸ್ತು ಶಿಲ್ಪಿ 'ಆಂಟೋನಿ ಗೌಡಿ’ ವಿನ್ಯಾಸಗೊಳಿಸಿದ ಅತ್ಯದ್ಭುತ ಚರ್ಚ್‌ನ ದೃಶ್ಯವೊಂದು ಚಿತ್ರ-12 ರಲ್ಲಿದೆ. ಜಗತ್ಪ್ರಸಿದ್ಧವಾಗಿರುವ ಈ ವಿಸ್ಮಯದ ನಿರ್ಮಿತಿ ಯಾವ ನಗರದಲ್ಲಿದೆ ?

ಅ. ಲಂಡನ್

ಬ. ರೋಂ

ಕ. ನ್ಯೂಯಾರ್ಕ್

ಡ. ಬಾರ್ಸಿಲೋನಾ

ಇ. ಮಾಸ್ಕೋ

12.  ಇಸವಿ 2020 ರ ವೇಳೆಗೆ ಪೂರ್ಣಗೊಳ್ಳಲಿರುವ ಬಹು ವಿಶಿಷ್ಟ ಗಗನಚುಂಬಿ ವಸತಿ ಕಟ್ಟಡದ ದೃಶ್ಯವೊಂದು ಚಿತ್ರ-13ರಲ್ಲಿದೆ. ಪ್ರತಿ ಅಂತಸ್ತೂ ಪ್ರತ್ಯೇಕವಾಗಿ, ಸ್ವತಂತ್ರವಾಗಿ ಸುತ್ತಬಲ್ಲಂತೆ ವಿನ್ಯಾಸಗೊಂಡಿರುವ ಈ ಅದ್ಭುತ ಕಟ್ಟಡ ಯಾವ ರಾಷ್ಟ್ರದಲ್ಲಿದೆ ?

ಅ. 
ಮಸ್ಕಟ್

ಬ. ದುಬೈ

ಕ. ಸೌದಿ ಅರೇಬಿಯಾ

ಡ. ಇರಾನ್

13. ಪ್ರಪಂಚದಾದ್ಯಂತ ಪರಿಚಿತವಾಗಿರುವ ಉಕ್ಕಿನ ನಿರ್ಮಿತಿ ’ ಐಫೆಲ್ ಗೋಪುರ ’ ಚಿತ್ರ 14 ರಲ್ಲಿದೆ. ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಈ ಗೋಪುರ ನಿರ್ಮಾಣಗೊಂಡ ವರ್ಷ ಯಾವುದು?

ಅ. 
1765

ಬ. 1889

ಕ.  1904

ಡ. 1915

**

ಉತ್ತರಗಳು

1. ಬ - ಸೃಷ್ಟಿಯ ಸ್ತಂಭಗಳು

2. ಇ -ವೇಲ್ ಶಾರ್ಕ್

3. ಇ - ಚೀನಾ

4. ಬ-ಸಾಗರಾವಾರ

5. ಕ - 35,000 ವರ್ಷ ಹಿಂದೆ

6. ಬ -ಹೂಪೋ

7. ಚಿತ್ರ 7 - ಪ್ರಯಾಣಿಕ ಹಡಗು ;  ಚಿತ್ರ 8 -     ತೈಲ ವಾಹಕ ನೌಕೆ

8. ಅ - ಹವಾಯ್

9. ಕ, ಡ, ಮತ್ತು ಈ

10. ಡ - ಅಗೇಟ್

11. ಡ - ಬಾರ್ಸಿಲೋನಾ

12. ಬ - ದುಬೈ

13. ಬ -1889

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry