ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ನಲ್ಲಿ ಕಾಡಿಗೆ ಭಾರೀ ಬೆಂಕಿ: 24 ಮಂದಿ ಸಾವು, 20 ಜನ ಗಾಯ

Last Updated 18 ಜೂನ್ 2017, 6:50 IST
ಅಕ್ಷರ ಗಾತ್ರ

ಲಿಸ್ಬನ್‌: ಮಧ್ಯ ಪೋರ್ಚುಗಲ್‌ನಲ್ಲಿ ಕಾಡಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು, 24 ಜನ ಸಾವಿಗೀಡಾಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಬಹುತೇಕ ಮಂದಿ ಕಾರುಗಳಲ್ಲಿಯೇ ಮೇತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ.

ಶನಿವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಬಳಿಕ, ಸುಮಾರು 500 ಅಗ್ನಿಶಾಮಕ ಮತ್ತು 160 ವಾಹನಗಳನ್ನು ಬೆಂಕಿ ನಿಯಂತ್ರಿಸಲು ಕಳುಹಿಸಲಾಗಿದೆ.

‘ನಾವು ನೋಡಿದ ಮಹಾ ದುರಂತ ಇದಾಗಿದೆ. ಈ ವರೆಗೆ 24 ಜನ ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ, ಸಾವುಗಳು ಇನ್ನೂ ಹೆಚ್ಚಾಗಬಹುದು’ ಎಂದು ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರು ಲಿಸ್ಬನ್ ಸಮೀಪದ ನಾಗರಿಕ ರಕ್ಷಣಾ ಪ್ರಧಾನ ಕಚೇರಿಯಲ್ಲಿ ಹೇಳಿದ್ದಾರೆ.

‘ಪ್ರಸ್ತುತ ಹೊತ್ತಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸುವುದು ಈಗ ಆದ್ಯತೆಯಾಗಿದೆ. ಬಳಿಕ, ಘಟನೆ ಏಕೆ ಸಂಭವಿಸಿತು ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.

‘ಫಿಗೈರೊ ಡಾಸ್ ವಿನ್ಹೋಸ್‌ನಿಂದ ಕಾಸ್ಟಾನ್ಹಿಯೆರಾ ಡಿ ಪೆರಾಗೆ ಹೋಗುವ ದಾರಿಯ ಮಧ್ಯೆ ಬೆಂಕಿಯ ಜ್ವಾಲೆಗೆ ಸಿಲುಕಿಕೊಂಡಿದ್ದ ಮೂವರು ಹೊಗೆಯಿಂದಾಗಿ ಉಸಿರಾಟ ನಡೆಸಲಾಗದೆ ಮೃತಪಟ್ಟಿದ್ದಾರೆ. 16 ಜನ ಕಾರುಗಳಲ್ಲಿಯೇ ಸುಟ್ಟು ಸಾವೀಗೀಡಾದ ಸ್ಥಿತಿಯಲ್ಲಿ ಲಭ್ಯವಾಗಿದ್ದಾರೆ’ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT