ಬುಧವಾರ, ಫೆಬ್ರವರಿ 19, 2020
24 °C

ಸರ ಕಿತ್ತು ಓಡಿದವನನ್ನು ಬೆನ್ನಟ್ಟಿ ಹಿಡಿದ ಮಹಿಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ ಕಿತ್ತು ಓಡಿದವನನ್ನು ಬೆನ್ನಟ್ಟಿ ಹಿಡಿದ ಮಹಿಳೆ!

ಶ್ರೀರಂಗಪಟ್ಟಣ: ಕಾರಿನಲ್ಲಿ ಕುಳಿತಿದ್ದಾಗ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಓಡಿದ ಕಿಡಿಗೇಡಿಯನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಮೀಪದ ಗಂಜಾಂ ನಿಮಿಷಾಂಬಾ ದೇವಾಲಯಕ್ಕೆ ಶನಿವಾರ ಕುಟುಂಬ ಸದಸ್ಯರ ಜತೆ ಬಂದಿದ್ದ ಬೆಂಗಳೂರು ಮಹಾಲಕ್ಷ್ಮಿಪುರಂನ ಸುರೇಶ್‌ಕುಮಾರ್‌ ಅವರ ಪತ್ನಿ ನವ್ಯಾ (23) ಈ ಸಾಹಸ ಮಾಡಿದವರು.

ಪಾಂಡವಪುರ ತಾಲ್ಲೂಕು ಸಣಬ ಗ್ರಾಮದ ರಾಜು ಎಂಬವರ ಮಗ ನವೀನ್‌ಕುಮಾರ್‌ (25) ಸಿಕ್ಕಿಬಿದ್ದವ. ನವ್ಯಾ ಆರೋಪಿಯನ್ನು ಹಿಡಿದ ಕೂಡಲೇ ಸುತ್ತಲು ಇದ್ದ ಜನರು ಹಾಗೂ ವ್ಯಾಪಾರಿಗಳು ನವೀನ್‌ಕುಮಾರ್‌ನನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಎಸ್‌ಐ ಯೋಗಾಂಜನಪ್ಪ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.

ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಎಂ.ಎ. ಪದವೀಧರನಾಗಿರುವ ಆರೋಪಿ ನವೀನ್‌ಕುಮಾರ್‌ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಾನೆ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಈ ಕೃತ್ಯಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಸಾಹಸಕ್ಕೆ ಪೊಲೀಸರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)