ಶನಿವಾರ, ಡಿಸೆಂಬರ್ 7, 2019
16 °C

ಹಳೆ ವಸ್ತುಗಳಿಂದ ಹೂದಾನಿ ಚಿತ್ತಾರ

Published:
Updated:
ಹಳೆ ವಸ್ತುಗಳಿಂದ ಹೂದಾನಿ ಚಿತ್ತಾರ

ರಜಿತಾ ಮೆನನ್‌

ಪ್ರಯಾಣ ಮಾಡುವಾಗ, ಮನೆಯಲ್ಲಿ ಸುಮ್ಮನೆ ಕುಳಿತಿರುವಾಗ, ಮಲಗಿರುವಾಗ ಇವರ ತಲೆಯಲ್ಲಿ ಯಾವಾಗಲೂ ಹೊಸ ವಿನ್ಯಾಸದ್ದೇ ಆಲೋಚನೆ. ಇದು ಸಿಲ್ವಿಯಾ ಮಾರ್ಟಿಸ್‌ ಅವರ ಕೈಯಲ್ಲಿ ಹೊಸ ಕಲಾಕೃತಿ ರಚನೆಗೆ ಕಾರಣ.

ಬಾಲ್ಯದಲ್ಲಿ ಹಳೆಯ ಹಾಗೂ ನಿರುಪಯುಕ್ತ ವಸ್ತುಗಳಿಂದ ಕೀಟ, ಸಣ್ಣ ಚಿಟ್ಟೆಗಳು, ಪ್ರಾಣಿಗಳ ಆಕೃತಿ ಹಾಗೂ ಹೂದಾನಿ, ಬಾಟಲಿಗಳ ಮೇಲೆ ಚಿತ್ತಾರ, ಸಣ್ಣ ಬೊಂಬೆಗಳು ಮಾಡುವ ಅಭ್ಯಾಸ ಬೆಳೆಸಿಕೊಂಡ ಸಿಲ್ವಿಯಾ ಮದುವೆ ನಂತರವೂ ಅದನ್ನು ಮುಂದುವರಿಸುತ್ತಲೇ ಇದ್ದಾರೆ.

ಸಿಲ್ವಿಯಾ ತಮ್ಮ ಹವ್ಯಾಸಕ್ಕಾಗಿ ಬ್ಯಾಂಕ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. 'ನಾನು ಬ್ಯಾಂಕ್‌ ಉದ್ಯೋಗಿಯಾಗಿದ್ದೆ. ಆದರೆ ಆ ಸಮಯದಲ್ಲಿ ನನಗಾಗಿ ಸಮಯ ಸಿಗುತ್ತಿರಲಿಲ್ಲ. ನನ್ನ ಹವ್ಯಾಸ ಮುಂದುವರಿಸಲು ವಸ್ತುಗಳನ್ನು ಸಂಗ್ರಹಿಸಿ ಇಡುತ್ತಿದ್ದೆ. ಆ ವಸ್ತುಗಳ ಸಂಗ್ರಹ ನೋಡುವಾಗ ಬೇಸರವಾಗುತ್ತಿತ್ತು. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದೆ. ಒಂದು ವರ್ಷದಿಂದ ನನ್ನ ಎಲ್ಲಾ ಆಲೋಚನೆಗಳನ್ನು ಕೃತಿ ರೂಪಕ್ಕೆ ಇಳಿಸುತ್ತೇನೆ’ ಎಂದು ನಗುತ್ತಾ ಹೇಳುತ್ತಾರೆ.

ಇನ್ನು ಸಿಲ್ವಿಯಾ ಅವರ ಕಲಾಕೃತಿಗಳು ಸುಂದರ ಹಾಗೂ ವರ್ಣಮಯವಾಗಿದೆ. ಮತ್ತೊಂದು ವಿಶೇಷತೆಯೆಂದರೆ  ಎಲ್ಲಾ ವಸ್ತುಗಳನ್ನು ಹಳೆಯ ಹಾಗೂ ಬಳಸಿ ಬಿಸಾಕಿದ ವಸ್ತುಗಳಿಂದ ತಯಾರಿಸಲಾಗಿದೆ. ‘ನಾನು ಯಾವುದಾದರೂ ವಸ್ತುಗಳನ್ನು ಬಿಸಾಕುವ ಮೊದಲು ಆ ವಸ್ತುಗಳನ್ನು ಇನ್ಯಾವುದಾದರೂ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವೇ? ಎಂದು ಯೋಚಿಸುತ್ತೇನೆ. ಈ ರೀತಿ ಅನೇಕ ಜಾರ್‌ಗಳು ಹಾಗೂ ಬಾಟಲಿಗಳ ಲೋಹದ ಮುಚ್ಚಳಗಳಿಂದ ಬಗೆ ಬಗೆ ಕಲಾಕೃತಿ ರಚಿಸಿದ್ದೇನೆ.ಇತ್ತೀಚೆಗೆ ನಾನು ಶ್ಯಾಂಪೂ ಬಾಟಲಿಗಳಿಂದಲೂ ಇಂತಹ ಕಲಾಕೃತಿ ರಚಿಸಲು ಆರಂಭಿಸಿದ್ದೇನೆ’ ಎಂದು ತಮ್ಮ ಹವ್ಯಾಸ ವಿಸ್ತಾರದ ಬಗ್ಗೆ ಮಾತನಾಡುತ್ತಾರೆ.

ಅವರು ದಿನಪತ್ರಿಕೆ ಹಾಗೂ ಓಟ್ಸ್‌ನ್ನೂ ಸಹ ತಮ್ಮ ಕಲೆಗೆ ಬಳಸಿಕೊಳ್ಳುತ್ತಾರೆ. ‘ನಾನು ಓಟ್ಸ್‌ನಿಂದ ಸಣ್ಣ ಬೊಂಬೆಗಳನ್ನು ರಚಿಸಿದ್ದೇನೆ. ಆದರೆ ಇಲ್ಲಿಯವರೆಗೂ ಮಣ್ಣಿನ ಬೊಂಬೆಗಳನ್ನು ರಚಿಸಲು ಪ್ರಯತ್ನಪಟ್ಟಿಲ್ಲ. ಭವಿಷ್ಯದಲ್ಲಿ ಪ್ರಯತ್ನಿಸಬೇಕು’ ಎಂದು ಹೇಳುತ್ತಾರೆ.

ಇವರು ಕಳೆದ ವರ್ಷ ನಾರ್ವೆಗೆ ಪ್ರವಾಸ ತೆರಳಿದ್ದಾಗ ಅಲ್ಲಿ ಓಟ್ಸ್‌ನಿಂದ ಬೊಂಬೆ ತಯಾರಿ ಬಗ್ಗೆ ನೋಡಿದ್ದರು. ಅದೇ ಸಿಲ್ವಿಯಾಗೆ ಸ್ಫೂರ್ತಿ. ‘ನಾನು ಹಾಗೂ ನನ್ನ ಗಂಡ ಕಳೆದ ವರ್ಷ ನಾರ್ವೆಯ ಸಣ್ಣ ಪಟ್ಟಣದಲ್ಲಿ ಹೋಗುತ್ತಿದ್ದಾಗ ಓಟ್ಸ್‌ನಿಂದ ಮಾಡಿದ ಸಣ್ಣ ಬೊಂಬೆಗಳು ಗಮನಸೆಳೆದವು’ ಎನ್ನುತ್ತಾರೆ ಅವರು.

ಸಿಲ್ವಿಯಾ ಈ ಕಲೆಯನ್ನು ಸ್ವಪ್ರಯತ್ನ

ದಿಂದಲೇ ಪ್ರಯತ್ನಿಸಿ, ಸಫಲ ಸಾಧಿಸಿದ್ದಾರೆ. ‘ನಾನು ಕಲಾಕೃತಿಗೆ ವಿವಿಧ ಬಣ್ಣಗಳನ್ನು ಬಳಸುತ್ತೇನೆ. ನಾನು ಕೆಲ ಬಣ್ಣಗಳನ್ನೇ ಮಿಶ್ರ ಮಾಡಿಕೊಂಡು ಕಲಾಕೃತಿ ಸುಂದರವಾಗಿ ಕಾಣುವಂತೆ ಮಾಡುತ್ತೇನೆ. ಶಾಲಾದಿನಗಳಲ್ಲೇ ಬಣ್ಣ ಹಾಕಲು ಬ್ರಶ್‌ ಬಳಸುತ್ತಿದ್ದೆ, ಈಗಲೂ ಹಾಗೇ ಮಾಡುತ್ತೇನೆ’ ಎನ್ನುತ್ತಾರೆ.

ಈ ಹವ್ಯಾಸದ ಬಗ್ಗೆ ಇವರು ಆಸಕ್ತರಿಗೆ ತರಬೇತಿ ನೀಡುತ್ತಾರೆ. ಇವರು ’ಬೆಂಗಳೂರು ಕ್ರಾಫ್ಟ್‌ ಲವರ್ಸ್‌’ ಫೇಸ್‌ಬುಕ್‌ ಸದಸ್ಯೆಯೂ ಹೌದು. ಇವರ ಕಲಾಕೃತಿಗಳನ್ನು ಅವರ ಪೇಸ್‌ಬುಕ್‌ ಪುಟ ‘ಮೈ ಹಾರ್ಟ್‌ ಗ್ಯಾಲರಿ’ಯಲ್ಲಿ ನೋಡಬಹುದು.

(ಸಿಲ್ವಿಯಾ ಸಂಪರ್ಕ ಸಂಖ್ಯೆ 99805 21284)

ಪ್ರತಿಕ್ರಿಯಿಸಿ (+)