ಆರ್‌ಬಿಐಗೆ ಮರಳಿದ ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳು: ದೇಶದಲ್ಲಿ ಕಾಳಧನವೇ ಇಲ್ಲ!

7

ಆರ್‌ಬಿಐಗೆ ಮರಳಿದ ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳು: ದೇಶದಲ್ಲಿ ಕಾಳಧನವೇ ಇಲ್ಲ!

Published:
Updated:
ಆರ್‌ಬಿಐಗೆ ಮರಳಿದ ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳು: ದೇಶದಲ್ಲಿ ಕಾಳಧನವೇ ಇಲ್ಲ!

ನವದೆಹಲಿ: ನೋಟು ರದ್ಧತಿ ಬಳಿಕ ₹1000 ಮುಖಬೆಲೆಯ ಶೇ 98.7 ರಷ್ಟು ನೋಟುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ )ಮರಳಿವೆ ಎಂದು  ಆರ್‌ಬಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.  ಇದರಿಂದ ದೇಶದಲ್ಲಿ ಕಾಳಧನವೇ ಇಲ್ಲ ಎಂಬುದು ವೇದ್ಯವಾದಂತಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬ್ಯಾಂಕಿಂಗ್‌,  ಖಜಾನೆ ಮತ್ತು ಸಾರ್ವಜನಿಕರ ಬಳಿಯಿಂದ 8,925 ಕೋಟಿಯಷ್ಟು ₹1000 ಮುಖ ಬೆಲೆಯ ನೋಟುಗಳು ಆರ್‌ಬಿಐಗೆ ಮರಳಿವೆ. ಇನ್ನು ಶೇ 1.3 ರಷ್ಟು ನೋಟುಗಳು ಮಾತ್ರ  ಆರ್‌ಬಿಐ ಕೈಸೇರಿಲ್ಲ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಆರ್‌ಬಿಐ ವೆಬ್‌ಸೈಟ್‌ ನಲ್ಲಿ ₹500 ಮುಖ ಬೆಲೆಯ ನೋಟುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ.

ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಳಧನವಿದೆ ಎಂದು ಹೇಳುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಈ ಮಾಹಿತಿಯಿಂದ ಮುಖಭಂಗವಾದಂತಾಗಿದೆ.

ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳ ಮರಳಿರುವುದರಿಂದ ಕಾಳಧನ ಅತಿ ಕಡಿಮೆ ಪ್ರಮಾಣದಲ್ಲಿ ಇರುವುದನ್ನು ಊಹಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry