ಗುರುವಾರ , ಜನವರಿ 21, 2021
16 °C
ಮೊಬೈಲ್‌ ಸೇವಾ ಸಂಸ್ಥೆ ಏರ್‌ಟೆಲ್‌ ಉಪಕ್ರಮ

ಬೆಂಗಳೂರಿಗೆ ಶೀಘ್ರ ‘5ಜಿ’ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿಗೆ ಶೀಘ್ರ ‘5ಜಿ’ ತಂತ್ರಜ್ಞಾನ

ಬೆಂಗಳೂರು: ಬೆಂಗಳೂರಿನ ಮೊಬೈಲ್‌ ಗ್ರಾಹಕರು ಸದ್ಯಕ್ಕೆ ಬಳಸುತ್ತಿರುವ ‘4ಜಿ’ ವೇಗಕ್ಕಿಂತ 10 ಪಟ್ಟು ವೇಗದ ‘5ಜಿ’ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಶೀಘ್ರದಲ್ಲಿಯೇ ನಿಜವಾಗಲಿದೆ.

ದೇಶದ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆಯಾಗಿರುವ ಏರ್‌ಟೆಲ್‌, ನಗರದಲ್ಲಿ ‘5ಜಿ’ ಮೊಬೈಲ್‌ ತಂತ್ರಜ್ಞಾನ ಆರಂಭಿಸಲು ಮುಂದಾಗಿದೆ.  ಮೊಬೈಲ್‌ನ ಹೊಸ ತಲೆಮಾರಿನ ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರು ದೇಶದ ಮೊದಲ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಏರ್‌ಟೆಲ್‌ ತನ್ನ ‘5ಜಿ’ ಸೇವೆಯನ್ನು ಮ್ಯಾಸಿವ್‌ ಮಲ್ಟಿಪಲ್‌ – ಇನ್‌ಪುಟ್‌ ಮಲ್ಟಿಪಲ್‌ ಔಟ್‌ಪುಟ್‌ (ಮ್ಯಾಸಿವ್‌ ಎಂಐಎಂಒ) ತಂತ್ರಜ್ಞಾನದ ನೆರವಿನಿಂದ ಬಳಕೆಗೆ ತರಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದೆ. ಈ ಮೊದಲ ಹಂತದಲ್ಲಿ  ಕೋಲ್ಕತ್ತ ನಗರವೂ ಸೇರಿದೆ.

‘5ಜಿ’ ತಂತ್ರಜ್ಞಾನವು 500 ಎಂಬಿಪಿಎಸ್‌ಗಿಂತ ಹೆಚ್ಚಿನ ವೇಗದ ಸಾಮರ್ಥ್ಯವನ್ನೂ ಹೊಂದಿರಲಿದ್ದು, ಗರಿಷ್ಠ ಮಟ್ಟ 1 ಜಿಬಿಪಿಎಸ್‌ವರೆಗೆ ಇರಲಿದೆ. ಆರಂಭದಲ್ಲಿ ಸದ್ಯದ ‘4ಜಿ’ ವೇಗವಾದ 16 ಎಂಬಿಪಿಎಸ್‌ಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಿನ ವೇಗವನ್ನು ‘5ಜಿ’ ಹೊಂದಿರಲಿದೆ. ‘5ಜಿ’ವೇಗವು 40ರಿಂದ 45 ಎಂಬಿಪಿಎಸ್‌ವರೆಗೆ ಇರಲಿದೆ.

ಮೊಬೈಲ್ ತರಂಗಾಂತರಗಳ ದಕ್ಷತೆಯನ್ನು  ಐದರಿಂದ ಏಳುಪಟ್ಟುಗಳಷ್ಟು ವಿಸ್ತರಿಸುವ ‘ಮ್ಯಾಸಿವ್‌ ಎಂಐಎಂಒ’ ತಂತ್ರಜ್ಞಾನವನ್ನು ದೇಶದಲ್ಲಿ ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

_ಫುರ್ಖಾನ್‌ ಮೊಹರ್‌ಕಾನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.