ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ‘ಕ್ಲೀನ್‌ ಸ್ವೀಪ್‌’ ಸಾಧನೆ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದುಬೈ: ಆಫ್‌ ಸ್ಪಿನ್ನರ್‌ ದಿಲ್ರುವಾನ ಪೆರೇರಾ (98ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ 68ರನ್‌ಗಳಿಂದ ಗೆದ್ದಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ.

ಗೆಲುವಿಗೆ 317ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ದ್ವಿತೀಯ ಇನಿಂಗ್ಸ್‌ನಲ್ಲಿ 90.2 ಓವರ್‌ಗಳಲ್ಲಿ 248ರನ್‌ಗಳಿಗೆ ಆಲೌಟ್‌ ಆಯಿತು.

ಗುರಿ ಬೆನ್ನಟ್ಟಿದ ಸರ್ಫರಾಜ್‌ ಅಹ್ಮದ್‌ ಬಳಗ ಆರಂಭದಿಂದಲೇ ಕುಸಿತದ ಹಾದಿ ಹಿಡಿಯಿತು. ಶಾನ್‌ ಮಸೂದ್‌ (21), ಶಮಿ ಅಸ್ಲಾಂ (1), ಅಜರ್‌ ಅಲಿ (17), ಹ್ಯಾರಿಸ್‌ ಸೋಹೈಲ್‌ (10) ಮತ್ತು ಬಾಬರ್‌ ಆಜಮ್‌ (0) ಬೇಗನೆ ನಿರ್ಗಮಿಸಿದರು. ಒಂದೆಡೆ ಪ್ರಮುಖ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸುತ್ತಿದ್ದರೂ ಅಸದ್‌ ಶಫಿಕ್‌ (112; 176ಎ, 10ಬೌಂ) ಎದೆಗುಂದಲಿಲ್ಲ. ಲಂಕಾ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ಅವರು 11ನೇ ಟೆಸ್ಟ್‌ ಶತಕ ಸಿಡಿಸಿ ಸಂಭ್ರಮಿಸಿದರು.

ನಾಯಕ ಸರ್ಫರಾಜ್‌ (68;130ಎ, 5ಬೌಂ) ಕೂಡ ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು. ಇವರು ಕ್ರೀಸ್‌ನಲ್ಲಿದ್ದಷ್ಟು ಕಾಲ ಪಾಕಿಸ್ತಾನ ಗೆಲುವಿನ ಕನಸು ಕಂಡಿತ್ತು. 79ನೇ ಓವರ್‌ ಬೌಲ್‌ ಮಾಡಿದ ದಿಲ್ರುವಾನ ಪೆರೇರಾ ಎದುರಾಳಿಗಳ ಆಸೆಗೆ ತಣ್ಣೀರು ಸುರಿದರು.  ಐದನೇ ಎಸೆತದಲ್ಲಿ ಅವರು ಸರ್ಫರಾಜ್‌ ವಿಕೆಟ್‌ ಉರುಳಿಸಿದರು. ಇದರೊಂದಿಗೆ 173ರನ್‌ಗಳ ಅಮೋಘ ಆರನೇ ವಿಕೆಟ್‌ ಜೊತೆಯಾಟಕ್ಕೂ ತೆರೆ ಬಿತ್ತು. ಆ ನಂತರ ಪಾಕ್‌ ಲಘುಬಗೆಯಲ್ಲಿ ವಿಕೆಟ್‌ ಕಳೆದುಕೊಂಡು ಸೋಲಿನ ಪ್ರಪಾತಕ್ಕೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: ಮೊದಲ ಇನಿಂಗ್ಸ್‌: 159.2 ಓವರ್‌ಗಳಲ್ಲಿ 482 ಮತ್ತು 26 ಓವರ್‌ಗಳಲ್ಲಿ 96.

ಪಾಕಿಸ್ತಾನ: ಪ್ರಥಮ ಇನಿಂಗ್ಸ್‌: 90.3 ಓವರ್‌ಗಳಲ್ಲಿ 262 ಮತ್ತು 90.2 ಓವರ್‌ಗಳಲ್ಲಿ 248 (ಅಸದ್‌ ಶಫಿಕ್‌ 112, ಸರ್ಫರಾಜ್‌ ಅಹ್ಮದ್‌ 68; ದಿಲ್ರುವಾನ ಪೆರೇರಾ 98ಕ್ಕೆ5, ಹೆರಾತ್‌ 57ಕ್ಕೆ2, ಸುರಂಗಾ ಲಕ್ಮಲ್‌ 35ಕ್ಕೆ1). ಫಲಿತಾಂಶ: ಶ್ರೀಲಂಕಾ ತಂಡಕ್ಕೆ 68ರನ್‌ ಗೆಲುವು ಹಾಗೂ 2–0ರಲ್ಲಿ ಸರಣಿ.

ಪಂದ್ಯ ಮತ್ತು ಸರಣಿ ಶ್ರೇಷ್ಠ: ದಿಮುತ್‌ ಕರುಣಾರತ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT