ಸೋಮವಾರ, ಸೆಪ್ಟೆಂಬರ್ 16, 2019
22 °C

ವೇತನ ಆಯೋಗದ ಅಧ್ಯಕ್ಷರಿಗೆ ಅಂಧ ನೌಕರರ ಮನವಿ

Published:
Updated:

ಬೆಂಗಳೂರು: ಸಮರ್ಪಕವಾಗಿ ಕೆಲಸ ನಿರ್ವಹಿಸಲು ಪೂರಕ ವಾತಾವರಣ ಮತ್ತು ಅಗತ್ಯ ಉಪಕರಣ ಒದಗಿಸಬೇಕು ಎಂದು ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಪ್ರತಿನಿಧಿಗಳು ಆರನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಗುರುವಾರ ಅಧ್ಯಕ್ಷರನ್ನು ಭೇಟಿಯಾದ ಸಂಘದ ಪ್ರತಿನಿಧಿಗಳು, ಅಂಧರು ಕೆಲಸ ನಿರ್ವಹಿಸಲು ಬಳಸುವ ಸ್ಕ್ರೀನ್ ರೀಡರ್‌ನಂತಹ ಸಹಾಯಕ ತಂತ್ರಾಂಶಗಳ ಮೂಲಕ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ‘ಅಂಗವಿಕಲರ ಹಕ್ಕುಗಳ ಕಾಯ್ದೆ–2016’ ಪ್ರಕಾರ ಅಂಧ ಮತ್ತು ಅಂಗವಿಕಲ ನೌಕರರನ್ನು ಕೆಲಸ ಮಾಡುವ ಸ್ಥಳಗಳಲ್ಲಿ ಗೌರವದಿಂದ ನಡೆಸಿಕೊಳ್ಳಬೇಕು ಎಂದೂ ಮನವಿ ಮಾಡಿದರು.

ದೃಷ್ಟಿ ಇರುವ ನೌಕರರು ಮಾಡುವಂಥ ಎಲ್ಲ ಕೆಲಸಗಳನ್ನು ಅಂಧ ನೌಕರರು ಹೇಗೆ ಮಾಡಬಹುದು ಎಂಬ ಕೆಲವು ಅಂಶಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಸಂಘದ ಪ್ರತಿನಿಧಿಗಳು ಆಯೋಗದ ಸದಸ್ಯರ ಎದುರು ಪ್ರದರ್ಶಿಸಿದರು.

Post Comments (+)