ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನೆಸ್‌ ರೆಕಾರ್ಡ್‌: ಡೇರಾ ಸಚ್ಚಾ ಸೌದಾದ ದಾಖಲೆ ಮುರಿದ ಅಯೋಧ್ಯಾ ದೀಪೋತ್ಸವ

Last Updated 20 ಅಕ್ಟೋಬರ್ 2017, 10:53 IST
ಅಕ್ಷರ ಗಾತ್ರ

ಅಯೋಧ್ಯೆ: ಸರಯೂ ನದಿ ದಂಡೆಯ ಮೇಲಿರುವ ರಾಮ್‌ ಕೀ ಪೈದಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಅತಿಹೆಚ್ಚು ಮಣ್ಣಿನ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿದೆ.

ಕಾರ್ಯಕ್ರಮವನ್ನು ಗಿನ್ನೆಸ್‌ ವಿಶ್ವದಾಖಲೆ ತಂಡದ ಸದಸ್ಯರು ರೆಕಾರ್ಡ್‌ ಮಾಡಿಕೊಂಡಿದ್ದು, ಈ ವೇಳೆ 1,87,213 ಮಣ್ಣಿನ ಹಣತೆಗಳನ್ನು ಬೆಳಗಿಸಿರುವುದನ್ನು ಖಚಿತಪಡಿಸಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನ ಡೇರಾ ಸಚ್ಚಾ ಸೌದಾ ಸಂಸ್ಥೆ ಹೆಸರಿನಲ್ಲಿತ್ತು. ಈ ಸಂಸ್ಥೆ 2016ರ ಸೆಪ್ಟೆಂಬರ್‌ನಲ್ಲಿ 1,50,009 ಮಣ್ಣಿನ ಹಣತೆಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಿತ್ತು.

ಗುಜರಾತ್‌ ಮೂಲದ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಇಮ್ಯಾಜಿನೇಷನ್‌, ರಾಮಜನ್ಮಭೂಮಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಬಗ್ಗೆ ಮಾತನಾಡಿರುವ ಕಂಪೆನಿಯ ನಿಶ್ಚಲ್‌ ಬೊರಾಟ್‌, ‘ರಾಮ್‌ ಕಿ ಪೈದಿಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವದಲ್ಲಿ 1,87,213 ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದೇವೆ. ಇದನ್ನು ಗಿನ್ನೆಸ್‌ ವಿಶ್ವದಾಖಲೆ ತಂಡದ ಸದಸ್ಯರೊಡನೆ ರೆಕಾರ್ಡ್‌ ಮಾಡಿಕೊಂಡಿದ್ದೇವೆ. ಆದರೆ, ಗಿನ್ನೆಸ್ ತಂಡದವರು ತಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪ್ರಮಾಣಪತ್ರವನ್ನು ನೀಡಲಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

‘ಇದು ಅವಿಸ್ಮರಣೀಯ ಕ್ಷಣ. ದೀಪಾವಳಿಯ ಸಂದರ್ಭದಲ್ಲಿ ಶ್ರೀರಾಮನ ಆಶೀರ್ವಾದೊಂದಿಗೆ ಅತಿಹೆಚ್ಚು ಹಣತೆಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆಯಲ್ಲಿ ದಾಖಲೆ ನಿರ್ಮಿಸಲಾಗಿದೆ’ ಎಂದು ಬಿಜೆಪಿ ಶಾಸಕ ವೇದ್‌ ಪ್ರಕಾಶ್‌ ಗುಪ್ತಾ ಬಣ್ಣಿಸಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಫಯಾಸಾಬಾದ್‌ನ ಡಾ.ರಾಮ್‌ ಮನೋಹರ್‌ ಲೋಹಿಯಾ ಅವಧ್‌ ವಿವಿ ಸಹ ಮಹತ್ವದ ಪಾತ್ರ ವಹಿಸಿದ್ದವು. ಪ್ರವಾಸೋದ್ಯಮ ಇಲಾಖೆಯು ದಾಖಲೆ ನಿರ್ಮಿಸುವ ಸಲುವಾಗಿ 171,000 ಮಣ್ಣಿನ ಹಣತೆಗಳನ್ನು ಬೆಳಗಿಸಲು ಯೋಜಿಸಿತ್ತು. ಇದಕ್ಕಾಗಿ ಸುಮಾರು 200,000 ಮಣ್ಣಿನ ಹಣತೆಗಳನ್ನು ರಾಮ್ ಕಿ ಪೈದಿ ಮೆಟ್ಟಿಲುಗಳ ಮೇಲೆ ಇರಿಸಲಾಗಿತ್ತು.

ಇದಕ್ಕಾಗಿ ವಿವಿಯ ಸಾವಿರಕ್ಕೂ ಹೆಚ್ಚು ಎನ್‌ಸಿಸಿ ಸ್ವಯಂ ಸೇವಕರನ್ನು ಬಳಸಿಕೊಳ್ಳಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT