ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು ಯೋಜನೆ: ಡಿ. 15ರಂದು ಲೋಕಾರ್ಪಣೆ

Last Updated 2 ನವೆಂಬರ್ 2017, 11:11 IST
ಅಕ್ಷರ ಗಾತ್ರ

ಕನಕಗಿರಿ: ತುಂಗಭದ್ರಾ ಕಾಲುವೆ ನೀರನ್ನು ಪೈಪ್‌ಲೈನ್‌ ಮೂಲಕ ಈ ಭಾಗದ ಎಂಟು ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಡಿ. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸುವರು ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಸಮೀಪದ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಯದುಣಸಿ ಕೆರೆಯನ್ನು ಈಚೆಗೆ ವೀಕ್ಷಿಸಿದ ನಂತರ ಮಾತನಾಡಿ, ಯೋಜನೆಗೆ ₹141 ಕೋಟಿ ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳ ಅಂತ್ಯದೊಳಗೆ ದೇವಲಾಪುರ, ರಾಂಪುರ, ಕನಕಗಿರಿಯ ಲಕ್ಷ್ಮೀದೇವಿ ಕೆರೆ, ಲಾಯದುಣಸಿ ಹಾಗೂ ಬಸರಿಹಾಳ ಸೇರಿ ಎಂಟು ಕೆರೆಗಳು ಭರ್ತಿಯಾಗಲಿವೆ ಎಂದು ತಿಳಿಸಿದರು.

ಕನಕಗಿರಿ ನಿಯೋಜಿತ ತಾಲ್ಲೂಕಿನಲ್ಲಿ ನವಲಿ ಮತ್ತು ನವಲಿ ರೈಸ್‌ಟೆಕ್ ಪಾರ್ಕ್‌ ಉಳಿಸುವ ವಿಷಯವನ್ನು ಬಗೆಹರಿಸಲಾಗವುದು, ಕಾರಟಗಿ ಹಾಗೂ ನವಲಿ ಭಾಗದ ಪ್ರಮುಖರನ್ನು ಕರೆದು ಚರ್ಚಿಸಲಾಗುತ್ತಿದೆ. ಕೆರೆಗಳಲ್ಲಿ ಜಂಗಲ್ ಬೆಳೆದ ಪರಿಣಾಮ ನೀರು ಹರಿಯಲು ಸಮಸ್ಯೆಯಾಗುತ್ತಿದ್ದು ಜಂಗಲ್‌ ಕಟಿಂಗ್ ಮಾಡಿಸಲು ಅನುದಾನ ನೀಡಲಾಗುವುದು ಎಂದರು. ಬಸರಿಹಾಳ, ಕಲಕೇರಿ, ಲಾಯದುಣಸಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು,

ಲಾಯದುಣಸಿ ಕೆರೆಗೆ ನೀರು ಸರಿಯಾಗಿ ಪೊರೈಕೆಯಾಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕನಕಪ್ಪ ತಳವಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ನಾಯಕ ಗುತ್ತಿಗೆದಾರ ಕಂಪೆನಿಯ ವಿಠ್ಠಲ ನಾವಡೆ ಅವರನ್ನು ತರಾಟೆಗೆ ತೆಗೆದುಕೊಂಡರು,

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ,
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ನಾಯಕ ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT