ಸೋಮವಾರ, ಮಾರ್ಚ್ 1, 2021
23 °C

ಆಷ್ಲೆ ಬಾರ್ಟಿಗೆ ಜಯಭೇರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಆಷ್ಲೆ ಬಾರ್ಟಿಗೆ ಜಯಭೇರಿ

ಜುವಾಯ್‌: ಆಸ್ಟ್ರೇಲಿಯಾದ ಆಷ್ಲೆ ಬಾರ್ಟಿ ಗುರುವಾರ ಡಬ್ಲ್ಯುಟಿಎ ಎಲೈಟ್ ಟ್ರೋಫಿ ಸೆಮಿಫೈನಲ್ ಟೆನಿಸ್ ಟೂರ್ನಿಯಲ್ಲಿ   ಏಂಜಲಿಕ್ ಕೆರ್ಬರ್‌ಗೆ ಆಘಾತ ನೀಡಿದ್ದಾರೆ.

21 ವರ್ಷದ ಯುವ ಆಟಗಾರ್ತಿ ಬಾರ್ಟಿ ಕೇವಲ ಒಂದು ಗಂಟೆ 11 ನಿಮಿಷಗಳಲ್ಲಿ 6–3, 6–4ರಲ್ಲಿ ನೇರ ಸೆಟ್‌ಗಳಿಂದ ಕೆರ್ಬರ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಲಾಟ್ವಿಯಾದ ಅನಸ್ತಸಿಜಾ ಸೆವಾಸ್ತೊವಾ 6–3, 6–4ರಲ್ಲಿ ಜೆಕ್‌ ಗಣರಾಜ್ಯದ ಬಾರ್ಬರಾ ಸ್ಟ್ರೆಕೋವಾಗೆ ಸೋಲುಣಿಸಿದರು. ಅಮೆರಿಕದ ಕೊಕೊ ವಾಂಡ್‌ವೇಗ್ 6–3, 6–2ರಲ್ಲಿ ರಷ್ಯಾದ ಎಲೆನಾ ವೆಸ್ತಿನಾ ವಿರುದ್ಧ ಜಯಭೇರಿ ದಾಖಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.