ಸೋಮವಾರ, ಮಾರ್ಚ್ 1, 2021
20 °C
ವಾಹನಗಳ ಸಂಚಾರಕ್ಕೆ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಚಾಲನೆ

ಕೆಎಸ್ಆರ್‌ಟಿಸಿಯಿಂದ ‘ಬಸ್ ಮಿತ್ರ’ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್ಆರ್‌ಟಿಸಿಯಿಂದ ‘ಬಸ್ ಮಿತ್ರ’ ಪರಿಚಯ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಹೊಸದಾಗಿ ‘ಬಸ್ ಮಿತ್ರ’ ವಾಹನಗಳನ್ನು ಪರಿಚಯಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

‌ಕೆಎಸ್‌ಆರ್‌ಟಿಸಿ ಕೇಂದ್ರೀಯ 3ನೇ ಘಟಕದ ಆವರಣದಲ್ಲಿ 45 ‘ಬಸ್ ಮಿತ್ರ’ ವಾಹನಗಳ (ಮಹೀಂದ್ರ ಬೊಲೇರೊ ಜೀಪುಗಳು) ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

‘ನಿಗಮದ ಎಲ್ಲಾ ವಿಭಾಗಗಳಿಗೆ ತಲಾ ಎರಡು ಅಥವಾ ಮೂರು ವಾಹನಗಳನ್ನು ನೀಡಲಾಗುವುದು. ತರಬೇತಿ ಪಡೆದ ಸಿಬ್ಬಂದಿ ತಂಡ ಮತ್ತು ಪ್ರಥಮ ಚಿಕಿತ್ಸೆಗೆ ಬೇಕಿರುವ ಸಲಕರಣೆಗಳ ಇದರಲ್ಲಿ ಇರಲಿವೆ. ಅಪಘಾತ ನಡೆದ ಸ್ಥಳಕ್ಕೆ ತಕ್ಷಣವೇ ತೆರಳುವ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುತ್ತಾರೆ’ ಎಂದು ಹೇಳಿದರು.

‘ಆರೋಗ್ಯ ಇಲಾಖೆಯ ಆಂಬುಲೆನ್ಸ್‌ಗಳು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿವೆ. ನಿಗಮದಲ್ಲೂ ಪ್ರತ್ಯೇಕ ತಂಡವೊಂದು ಪ್ರಯಾಣಿಕರ ರಕ್ಷಣೆ ಕೆಲಸ ಮಾಡಲಿದೆ. ₹ 3.52 ಕೋಟಿ ವೆಚ್ಚದಲ್ಲಿ 45 ವಾಹನಗಳನ್ನು ಖರೀದಿಸಲಾಗಿದೆ’ ಎಂದು ವಿವರಿಸಿದರು.

‘ಟಿಕೆಟ್‌ ಬುಕ್ಕಿಂಗ್‌ಗೆ ಇರುವ ಆನ್‌ಲೈನ್ ವ್ಯವಸ್ಥೆ ರದ್ದು ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಇದು ಕೇವಲ ವದಂತಿ ಅಷ್ಟೆ. ಆನ್‌ಲೈನ್‌ನಲ್ಲಿ ಇನ್ನಷ್ಟು ಸೇವೆ ಒದಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.