ಶನಿವಾರ, ಮಾರ್ಚ್ 6, 2021
28 °C

‘ಪದ್ಮಾವತಿ’ ನಿಷೇಧಕ್ಕೆ ಮತ್ತೆ ಒತ್ತಡ

ಪಿಟಿಐ Updated:

ಅಕ್ಷರ ಗಾತ್ರ : | |

‘ಪದ್ಮಾವತಿ’ ನಿಷೇಧಕ್ಕೆ ಮತ್ತೆ ಒತ್ತಡ

ಮುಂಬೈ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದ ಬಿಡುಗಡೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿಷೇಧ ಹೇರಬೇಕು ಎಂದು ಬಿಜೆಪಿ ಮುಖಂಡ ರಾಜ್ ಪುರೋಹಿತ್ ಅವರು ಗುರುವಾರ ಆಗ್ರಹಿಸಿದ್ದಾರೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ತಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಕತೆಯು ರಜಪೂತ ರಾಣಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸುತ್ತ ಸುತ್ತುತ್ತದೆ.

ಮತ್ತೊಬ್ಬ ಬಿಜೆಪಿ ಮುಖಂಡ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಅವರು ಚಿತ್ರ ನಿಷೇಧಕ್ಕೆ ಈ ಮೊದಲು ಆಗ್ರಹಿಸಿದ್ದರು. ಸಚಿವ ರಾವಲ್ ಅವರು ’ಪದ್ಮಾವತಿ‘ಯ ಗಂಡ ರಾವಲ್ ರತನ್ ಸಿಂಗ್ ಅವರ ವಂಶಸ್ಥರು ಕೂಡಾ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್ ಅವರನ್ನು ಭೇಟಿಯಾಗಿದ್ದ ರಾವಲ್, ಇತಿಹಾಸದಲ್ಲಿ ಸತ್ಯ ಘಟನೆಗಳನ್ನು ಹೇಗೆ ತಿರುಚಲಾಗಿದೆ ಎಂದು ವಿವರಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.