ಬುಧವಾರ, ಮಾರ್ಚ್ 3, 2021
19 °C
ಸರಕು ಮತ್ತು ಸೇವಾ ತೆರಿಗೆ ಜಾರಿ ಪರಿಣಾಮ

ತಯಾರಿಕಾ ವಲಯದ ಪ್ರಗತಿ ಕುಂಠಿತ

ಪಿಟಿಐ Updated:

ಅಕ್ಷರ ಗಾತ್ರ : | |

ತಯಾರಿಕಾ ವಲಯದ ಪ್ರಗತಿ ಕುಂಠಿತ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ನಕಾರಾತ್ಮಕ ಪರಿಣಾಮದಿಂದಾಗಿ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್‌ನಲ್ಲಿ ಮಂದ ಗತಿಯ ಬೆಳವಣಿಗೆ ಸಾಧಿಸಿದೆ.

ನಿಕೇಯ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೇಸ್‌ ಮ್ಯಾನೇಜರ್ಸ್ ಇಂಡಿಯಾ ಸೂಚ್ಯಂಕ (ಪಿಎಂಐ)  ಸೆಪ್ಟೆಂಬರ್‌ನಲ್ಲಿ 51.2 ರಷ್ಟಿತ್ತು. ಅದು ಅಕ್ಟೋಬರ್‌ನಲ್ಲಿ 50.3 ಕ್ಕೆ ಇಳಿಕೆ ಕಂಡಿದೆ.

2013ರ ಅಕ್ಟೋಬರ್ ನಂತರ ತಯಾರಿಕಾ ವಲಯದಲ್ಲಿ ಹೊಸ ಯೋಜನೆಗಳ ಪ್ರಮಾಣ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಹೀಗಾಗಿ ಸೂಚ್ಯಂಕ ತಗ್ಗಿದೆ.

ಜಿಎಸ್‌ಟಿಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಕೆಲವು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಆದರೆ ಮುಂದಿನ 12 ತಿಂಗಳ ಒಳಗಾಗಿ ಜಿಎಸ್‌ಟಿಯಿಂದ ಆಗುವ ಪ್ರಯೋಜನಗಳ ಸ್ಪಷ್ಟ ಚಿತ್ರಣ ಸಿಗಲಿದೆ. ಆಗ ಉದ್ಯಮ ಮತ್ತೆ ವಿಶ್ವಾಸ ಕಂಡುಕೊಳ್ಳಲಿದೆ ಎಂದು ಮರ್ಕಿಟ್ ಸಂಸ್ಥೆಯಲ್ಲಿ ಇರುವ ಅರ್ಥಶಾಸ್ತ್ರಜ್ಞ ಆಶ್ನಾ ದೊಢಿಯಾ ಹೇಳಿದ್ದಾರೆ.

ಸೇವಾ ವಲಯ ಚೇತರಿಕೆ: ಸೇವಾ ವಲಯದ ಪ್ರಗತಿ ಅಕ್ಟೋಬರ್‌ನಲ್ಲಿ 50.7 ರಿಂದ 51.7ಕ್ಕೆ ಚೇತರಿಕೆ ಕಂಡಿದೆ. ಕಳೆದ ಜೂನ್ ತಿಂಗಳಿನಿಂದಲೂ ಸೇವಾ ವಲಯದಲ್ಲಿ ಸಕಾರಾತ್ಮಕ ಬೇಡಿಕೆ ಇದೆ. ಹಾಗಾಗಿ ಸೇವಾ ವಲಯದ ಸೂಚ್ಯಂಕ ಏರಿಕೆ ಕಂಡಿದೆ ಎಂದು ನಿಕೇಯ್ ಇಂಡಿಯಾ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಖಾಸಗಿ ವಲಯದ ಚಟುವಟಿಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಇದರಿಂದ ಸೇವಾ ವಲಯ ಚೇತರಿಕೆ ಕಂಡುಕೊಳ್ಳುತ್ತಿದೆ ಎಂದು ಹೇಳಿದೆ.

ಸೇವಾ ವಲಯದಲ್ಲಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಹೀಗಿದ್ದರೂ ಮುಂದಿನ 12 ತಿಂಗಳಿನಲ್ಲಿ ಉತ್ತಮ ಚಟುವಟಿಕೆ ನಡೆಯಲಿದೆ ಎಂದು ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.

ಜಿಎಸ್‌ಟಿಯಿಂದ ಅಲ್ಪಾವಧಿಗೆ ವಹಿವಾಟಿನ ಮೇಲೆ ಸ್ವಲ್ಪ ನಕಾರಾತ್ಮಕ ಪರಿಣಾಮ ಬೀರಿದರೂ ದೀರ್ಘ ಅವಧಿಗೆ ಉದ್ಯಮದ ಬೆಳವಣಿಗೆಗೆ ಪೂರಕವಾಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.