ಶನಿವಾರ, ಮಾರ್ಚ್ 6, 2021
24 °C

ವೈರಲ್ ಆದ ಅಮಿತಾಭ್ ಕುಟುಂಬದ ಫೋಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈರಲ್ ಆದ ಅಮಿತಾಭ್ ಕುಟುಂಬದ ಫೋಟೊ

ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗಿಯಾದ ತಮ್ಮ ಕುಟುಂಬದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅಮಿತಾಭ್‌ ಬಚ್ಚನ್. ಈಗ ಫೋಟೊಗಳು ವೈರಲ್ ಆಗಿವೆ. ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಭ್ ಪುತ್ರಿ ಶ್ವೇತಾ ನಂದ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ.

ಜಯಾ ಬಚ್ಚನ್ ತಮ್ಮ ಮಗಳು ಶ್ವೇತಾ ಜೊತೆ ಇರುವ ಫೋಟೊ ಹೆಚ್ಚು ಲೈಕ್‌ ಪಡೆದಿದೆ. ಕೆಂಪು ಸೆಲ್ವಾರ್ ತೊಟ್ಟ ಐಶ್ವರ್ಯಾ ರೈ, ನೀಲಿ ಕುರ್ತಾ ತೊಟ್ಟ ಅಭಿಷೇಕ್ ಬಚ್ಚನ್ ಫೋಟೊದಲ್ಲಿ ಮಿಂಚುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ಸಾಮಾನ್ಯವಾಗಿ ದೂರವೇ ಉಳಿಯುವ ಬಚ್ಚನ್ ಕುಟುಂಬ ಮದುವೆ ಫೋಟೊಗಳಿಂದ ಸುದ್ದಿಯಾಗಿರುವುದು ವಿಶೇಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.