7

ಲಾರಿ–ಬೈಕ್ ಡಿಕ್ಕಿ: ನಿವೃತ್ತ ಯೋಧ ಸಾವು

Published:
Updated:
ಲಾರಿ–ಬೈಕ್ ಡಿಕ್ಕಿ: ನಿವೃತ್ತ ಯೋಧ ಸಾವು

ವಿಟ್ಲ: ವಿಟ್ಲ- ಕಾಸರಗೋಡು ರಸ್ತೆಯ ಕಾಶಿಮಠ ತಿರುವಿನಲ್ಲಿ ಬುಧವಾರ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾ ತದಲ್ಲಿ ಸವಾರ ಲಾರಿಯ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಕನ್ಯಾನ ನಿವಾಸಿ, ನಿವೃತ್ತ ಯೋಧ ವೆಂಕಪ್ಪ ಮೂಲ್ಯ ಡಿ. (53) ಮೃತಪಟ್ಟವರು. ಮುಡಿಪು ಐಟಿ ಕಂಪೆನಿಯೊಂದರ ಭದ್ರತಾ ಸಿಬ್ಬಂದಿ ಯಾಗಿದ್ದ ಇವರು, ಬೈಕ್ ಮೂಲಕ ವಿಟ್ಲಕ್ಕೆ ತೆರಳುತ್ತಿದ್ದ ವೇಳೆ ಸರ್ಕಾರಿ ಬಸ್ ನಿಲ್ದಾಣದ ಪಕ್ಕದ ತಿರುವಿನಲ್ಲಿ ಮುಂಭಾ ಗದಿಂದ ಬಸ್ ಬಂದಿದ್ದರಿಂದ, ಬೈಕ್ ವೇಗ ಕಡಿಮೆ ಮಾಡಿದರು. ಹಿಂದಿನಿಂದ ಕೆಂಪು ಕಲ್ಲು ತುಂಬಿದ್ದ ಲಾರಿಯೊಂದು ಬಂದು ಬೈಕ್‌ಗೆ ಡಿಕ್ಕಿಯಾಗಿದೆ. ಲಾರಿಯ ಡಿಕ್ಕಿಯ ವೇಗಕ್ಕೆ ಬೈಕ್ ರಸ್ತೆಯ ಎಡಭಾ ಗಕ್ಕೆ ಬಿದ್ದಿದ್ದು, ಸವಾರ ಲಾರಿಯ ಮುಂಭಾಗದ ಚಕ್ರಕ್ಕೆ ಸಿಲುಕಿದ್ದಾರೆ.

ಲಾರಿ ಚಾಲಕ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ಎಡಬದಿಗೆ ಹೋಗಿದ್ದು, ಬೈಕ್ ಸವಾರನನ್ನೂ ಎಳೆದುಕೊಂಡು ಹೋದ್ದ ರಿಂದ ದೇಹದ ಭಾಗಗಳು ಲಾರಿಯ ಚಕ್ರಗಳಲ್ಲಿ ಹಾಗೂ ಬಲಬದಿಯಲ್ಲಿ ಲೇಪನವಾಗಿದೆ. ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರೆದರು: ಬೈಕ್ ಸವಾರನನ್ನು ಲಾರಿಯಡಿಯಿಂದ ತೆಗೆಯಲು ಯಾರೊಬ್ಬರೂ ಮುಂದೆ ಬರದ ಸಮಯ ಯುಸೂಫ್ ಕಾಶೀಮಠ ಹಾಗೂ ಇನ್ನಿಬ್ಬರು ಇವರನ್ನು ಲಾರಿಯಡಿಯಿಂದ ಎತ್ತಿ ರಕ್ಷಣೆಗೆ ಪ್ರಯತ್ನಿಸಿದ್ದಾರೆ.

ಲಾರಿಗಳ ಆರ್ಭಟ: ವಿಟ್ಲ ಪೇಟೆ ಕಿರಿದಾಗಿದ್ದು, ಘನ ಲಾರಿಗಳ ಸಂ ಚಾರಕ್ಕೆ ಯೋಗ್ಯವಾಗಿಲ್ಲ. ಕಾಶೀಮಠ ಅಪಾಯಕಾರಿ ತಿರುವಿನಲ್ಲಿ ರಸ್ತೆ ಬದಿ ಯಲ್ಲಿ ಹೊಂಡಗಳಿದ್ದು, ವಾಹ ನಗಳಿಗೆ ಪರಸ್ಪರ ದಾರಿ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry