ಗುರುವಾರ , ಫೆಬ್ರವರಿ 25, 2021
20 °C

ವಧುವಿನ ದಿರಿಸಿನಲ್ಲಿ ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಧುವಿನ ದಿರಿಸಿನಲ್ಲಿ ಕರೀನಾ

ತಾಯಿಯಾದ ನಂತರ ಕರೀನಾ ಕಪೂರ್‌ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸದ್ಯ ‘ವೀರ್‌ ದಿ ವೆಡ್ಡಿಂಗ್‌’ ಚಿತ್ರದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹಾಗಂತ ಸಿನಿಮಾ, ಫ್ಯಾಷನ್‌ ಲೋಕದಿಂದ ಅವರು ದೂರವಿದ್ದಾರೆ ಎಂದಲ್ಲ. ಇತ್ತೀಚೆಗೆ ‘ಹಾರ್ಪರ್ಸ್‌ ಬಜಾರ್‌ ಬ್ರೈಡ್‌’ ನಿಯತಕಾಲಿಕೆಯ ಮುಖಪುಟಕ್ಕಾಗಿ ಮನೀಶ್‌ ಮಲ್ಹೋತ್ರಾ ವಿನ್ಯಾಸಗೊಳಿಸಿದ ದಿರಿಸು ತೊಟ್ಟು ಪೋಸ್‌ ನೀಡಿದ್ದಾರೆ.

ತಿಳಿ ನೀಲಿ, ಬಿಳಿ, ಬೂದುಬಣ್ಣದಲ್ಲಿ ವಿನ್ಯಾಸಗೊಳಿಸಿದ ಪಾಶ್ಚಾತ್ಯ ವಧುವಿನ ಉಡುಪು ಸಂಗ್ರಹದ ದಿರಿಸನ್ನು ತೊಟ್ಟು ಕರೀನಾ ಮಾದಕ ನೋಟ ಬೀರಿದ್ದಾರೆ. ಬಿಳಿಯ ಬಣ್ಣದ ಗೌನ್‌ ತೊಟ್ಟಿರುವ ಅವರನ್ನು ನೇರ ಕೂದಲು ಅಲಂಕರಿಸಿದೆ.

ಸ್ಮೋಕಿ ಐ ಹಾಗೂ ಅವರು ಧರಿಸಿರುವ ನೆಕ್ಲೆಸ್‌ ಕರೀನಾ ಚೆಲುವನ್ನು ಇಮ್ಮಡಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಕರೀನಾ ಈ ಚಿತ್ರವನ್ನು ಹಾಕಿಕೊಂಡಿದ್ದು 50 ಸಾವಿರಕ್ಕೂ ಹೆಚ್ಚು ಮಂದಿಯಿಂದ ಮೆಚ್ಚುಗೆಯೂ ದಕ್ಕಿದೆ. ಸಾಕಷ್ಟು ಅಭಿಮಾನಿಗಳು ಚಿತ್ರವನ್ನು ಶ್ಲಾಘಿಸಿ ಕಾಮೆಂಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.