ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನ ಆಹಾರ ಬಲ್ಲಿರೇ...

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಕ್ಕು ಸಾಕುವ ಮೊದಲು ಅದರ ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಳ್ಳಿ. ನೀವು ನೀಡುವ ಆಹಾರ ಅವುಗಳ ಆರೋಗ್ಯಕ್ಕೆ ಹಾನಿಯಾದೀತು ಜೋಕೆ..

*ಬೆಕ್ಕಿಗೆ ಚಾಕೊಲೆಟ್‌ ಕೊಡಬಾರದು. ಚಾಕೊಲೆಟ್‌ ತಿನ್ನುವುದರಿಂದ ಬೆಕ್ಕಿಗೆ ಹೃದಯ ಸಂಬಂಧಿ ತೊಂದರೆಯಾಗುವ ಸಂಭವವಿದೆ.

*ತುಂಬಾ ಮುಳ್ಳುಗಳಿರುವ ಮೀನು ಕೊಡಬೇಡಿ. ಮುಳ್ಳುಗಳು ಗಂಟಲಿನಲ್ಲಿ ಸಿಕ್ಕಿಕೊಂಡರೆ ಅವುಗಳಿಗೆ ತೊಂದರೆಯಾಗುತ್ತದೆ.

*ಹಸಿ ಮೊಟ್ಟೆ, ಮಾಂಸ ತಿಂದರೆ ಬೆಕ್ಕುಗಳ ಮಿದುಳಿಗೆ ಹಾನಿಯಾಗುತ್ತದೆ. ಹಾಗಾಗಿ ಬೇಯಿಸಿದ ಮೊಟ್ಟೆಯನ್ನೇ ಕೊಡಿ.

*ಅಣಬೆ ತಿನ್ನುವುದರಿಂದ ಅವುಗಳ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

*ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆಯಿಂದ ಬೆಕ್ಕುಗಳಲ್ಲಿ ರಕ್ತಹೀನತೆ ಉಂಟಾಗುವ ಸಂಭವ ಇರುತ್ತದೆ.

*ಮದ್ಯಪಾನ, ಕೆಫಿನ್‌ ಅಂಶವುಳ್ಳ ಪಾನೀಯ ನೆಲದ ಮೇಲೆ ಬಿದ್ದರೆ ತಕ್ಷಣ ಒರೆಸಿ. ಬೆಕ್ಕುಗಳು ಅದನ್ನು ಕುಡಿದರೆ ಅವುಗಳ ಯಕೃತ್‌, ಮಿದುಳಿಗೆ ತೊಂದರೆಯಾಗಬಹುದು.

*ದ್ರವಾಹಾರ ನೀಡುವುದು ಒಳ್ಳೆಯದು. ತರಕಾರಿ, ಮಾಂಸವನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ ಸೂಪ್‌ ತಯಾರಿಸಿ ಆಗಾಗ್ಗೆ ನೀಡಿ.

*ಕೊಬ್ಬು ಹೆಚ್ಚಿರುವ ಆಹಾರ ನೀಡದಿರುವುದು ಒಳಿತು. ಇಂತಹ ಆಹಾರ ಸೇವನೆಯಿಂದ ಬೆಕ್ಕಿಗೆ ವಾಂತಿ, ಭೇದಿ ಆಗುವ ಸಾಧ್ಯತೆ ಇದೆ.

*ಹೆಚ್ಚು  ಒಣದ್ರಾಕ್ಷಿಯನ್ನು ತಿನ್ನುವುದರಿಂದ ಬೆಕ್ಕಿನ ಮೂತ್ರಪಿಂಡ ವೈಫಲ್ಯವಾಗುತ್ತದೆ. 24 ಗಂಟೆಯ ಒಳಗೆ ಅತಿಸಾರ, ಅತಿಯಾದ ನಿದ್ರೆ, ಹೊಟ್ಟೆ ನೋವು, ಮೂತ್ರ ಕಡಿಮೆ ಹೋಗುವ ಸಮಸ್ಯೆ ಎದುರಿಸುತ್ತದೆ.

(ಮಾಹಿತಿ: ಪೆಟ್‌ ಎಜುಕೇಷನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT