ಭಾನುವಾರ, ಮಾರ್ಚ್ 7, 2021
19 °C
ಅಮಾನವೀಯ ಘಟನೆಯನ್ನು ಫೋನಿನಲ್ಲಿ ಸೆರೆಹಿಡಿದ ಮಗ

ಮಗುವನ್ನು ಚೀಲದೊಳಗೆ ತುರುಕಿ ಹಿಂಸೆ ನೀಡಿದ ಮಲತಾಯಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಗುವನ್ನು ಚೀಲದೊಳಗೆ ತುರುಕಿ ಹಿಂಸೆ ನೀಡಿದ ಮಲತಾಯಿ

ಚಂಡಿಗಡ: ಮಲತಾಯಿಯು ಐದು ವರ್ಷದ ಹೆಣ್ಣುಮಗುವನ್ನು ಚೀಲದೊಳಗೆ ಹಾಕಿ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಯಿಯ ಈ ದುಷ್ಕೃತ್ಯವನ್ನು ಮಗುವಿನ ಸಹೋದರ ಫೋನಿನಲ್ಲಿ ಸೆರೆ ಹಿಡಿದಿದ್ದಾನೆ. ಹಿಂಸೆಯ ವೇಳೆ ಮಗುವಿನ ಕಾಲಿನ ಭಾಗಕ್ಕೆ ಗಾಯವಾಗಿದೆ. ಮಗುವಿನ ತಂದೆಯು ತನ್ನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.

ಮಲತಾಯಿಯು ಆ ಮಗುವನ್ನು ಚೀಲದೊಳಗೆ ಹಾಕಿ ಮಗುವಿಗೆ ಹೊಡೆಯುತ್ತಿರುವುದು ಹಾಗೂ ಕಿವಿ ಮತ್ತು ಕೂದಲನ್ನು ಹಿಡಿದು ಎಳೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ಮಗುವಿನ ತಾಯಿಯು ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಆ ಮಗುವಿನ ತಂದೆ ಎರಡನೇ ಮದುವೆಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.