ಸೋಮವಾರ, ಮಾರ್ಚ್ 8, 2021
25 °C

ನ್ಯೂಜಿಲೆಂಡ್‌ಗೆ ಇನಿಂಗ್ಸ್ ಗೆಲುವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನ್ಯೂಜಿಲೆಂಡ್‌ಗೆ ಇನಿಂಗ್ಸ್ ಗೆಲುವು

ವೆಲಿಂಗ್ಟನ್‌, ನ್ಯೂಜಿಲೆಂಡ್‌: ಬ್ಯಾಟಿಂಗ್‌ನಲ್ಲಿ ದಿಢೀರ್ ಪತನ ಕಂಡ ವೆಸ್ಟ್ ಇಂಡೀಸ್ ತಂಡದ ಕನಸು ಕರಗಿತು. ನ್ಯೂಜಿಲೆಂಡ್‌ ಬೌಲರ್‌ಗಳ ಕರಾರುವಾಕ್‌ ದಾಳಿಗೆ ನಲುಗಿದ ತಂಡ ನಾಲ್ಕನೇ ದಿನ ಪತನ ಕಂಡಿತು. ಇದರ ಪರಿಣಾಮ ನ್ಯೂಜಿಲೆಂಡ್‌ ತಂಡ ಇನಿಂಗ್ಸ್‌ ಮತ್ತು 67 ರನ್‌ಗಳ ಗೆಲುವು ತನ್ನದಾಗಿಸಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ 386 ರನ್‌ಗಳ ಹಿನ್ನಡೆ ಕಂಡಿದ್ದ ಪ್ರವಾಸಿ ವೆಸ್ಟ್ ಇಂಡೀಸ್‌ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಕಂಡಿತ್ತು. ಕ್ರೇಗ್ ಬ್ರಾಥ್‌ವೇಟ್‌ (91; 221 ಎ, 1 ಸಿ, 8 ಬೌಂ) ಮತ್ತು ಶಾಯ್ ಹೋಪ್ ಅವರು ಭಾನುವಾರ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾಗಿದ್ದರು.

ಸೋಮವಾರ ಬೆಳಿಗ್ಗೆ ಒಂದು ತಾಸಿನಲ್ಲಿ ಬ್ರಾಥ್‌ವೇಟ್ ಔಟಾದರು. ಭೋಜನ ವಿರಾಮಕ್ಕೂ ಮೊದಲು ಎರಡು ವಿಕೆಟ್‌ಗಳು ಪತನಗೊಂಡವು. ನಂತರ ನ್ಯೂಜಿಲೆಂಡ್ ಪ್ರಬಲ ದಾಳಿ ನಡೆಸಿತು. ಹೀಗಾಗಿ ವೆಸ್ಟ್ ಇಂಡೀಸ್‌ನ ಕೊನೆಯ ಐದು ವಿಕೆಟ್‌ಗಳು ಒಂಬತ್ತು ಓವರ್‌ಗಳಲ್ಲಿ ಕೇವಲ 33 ರನ್‌ಗಳಿಗೆ ಉರುಳಿದವು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್ ಇಂಡೀಸ್‌, ಮೊದಲ ಇನಿಂಗ್ಸ್‌: 134

ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌: 9ಕ್ಕೆ520 ಡಿಕ್ಲೇರ್‌

ವೆಸ್ಟ್ ಇಂಡೀಸ್‌, ಎರಡನೇ ಇನಿಂಗ್ಸ್‌ (ಭಾನುವಾರದ ಅಂತ್ಯಕ್ಕೆ 2 ವಿಕೆಟ್‌ಗಳಿಗೆ 214): 106 ಓವರ್‌ಗಳಲ್ಲಿ 319 (ಕ್ರೇಗ್ ಬ್ರಾಥ್‌ವೇಟ್‌ 91, ಶಾಯ್‌ ಹೋಪ್‌ 37; ಟ್ರೆಂಟ್‌ ಬೌಲ್ಟ್‌ 87ಕ್ಕೆ2, ಮೆಟ್‌ ಹೆನ್ರಿ 57ಕ್ಕೆ3, ಡಿ ಗ್ರ್ಯಾಂಡೋಮ್‌ 40ಕ್ಕೆ2, ನೀಲ್‌ ವಾಗ್ನರ್‌ 102ಕ್ಕೆ2, ಮಿಚೆಲ್‌ ಸ್ಯಾಂಟ್ನರ್‌ 25ಕ್ಕೆ1).

ಫಲಿತಾಂಶ: ನ್ಯೂಜಿಲೆಂಡ್‌ಗೆ ಇನಿಂಗ್ಸ್ ಮತ್ತು 67 ರನ್‌ಗಳ ಜಯ. ಪಂದ್ಯಶ್ರೇಷ್ಠ: ನೀಲ್ ವಾಗ್ನರ್‌ (ನ್ಯೂಜಿಲೆಂಡ್‌). ಮುಂದಿನ ಪಂದ್ಯ–ಡಿಸೆಂಬರ್‌ 9ರಿಂದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.