ಕೊನೆಗೂ ವಿಶಾಲ್ ಕೃಷ್ಣ ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ

ಚೆನ್ನೈ: ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ವಿಶಾಲ್ ಕೃಷ್ಣ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಕೊನೆಗೂ ತಿರಸ್ಕರಿಸಿದೆ.
ವಿಶಾಲ್ ನಾಮಪತ್ರಕ್ಕೆ ಹತ್ತು ಮಂದಿ ಅನುಮೋದಕರ ಸಹಿ ಬೇಕಿತ್ತು. ಆದರೆ, ನಾಮಪತ್ರದಲ್ಲಿರುವ ಸಹಿ ತಮ್ಮದಲ್ಲ ಎಂದು ಸುಮತಿ ಮತ್ತು ದೀಪನ್ ಎಂಬುವವರು ತಿಳಿಸಿದ್ದರು.
ತಾಂತ್ರಿಕ ಕಾರಣ ಎಂದಷ್ಟೇ ಹೇಳಿ ಮಂಗಳವಾರ ನಟ ವಿಶಾಲ್ ಹಾಗೂ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.
ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದನ್ನು ವಿರೋಧಿಸಿ ನಟ ವಿಶಾಲ್ ಹಾಗೂ ಅವರ ಬೆಂಬಲಿಗರು ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚುನಾವಣಾ ಆಯೋಗದ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ನಾಮಪತ್ರ ಅಂಗೀಕಾರಗೊಂಡಿದೆ ಎಂದು ಆಯೋಗ ತಿಳಿಸಿತ್ತು. ಆದರೆ, ಅಂತಿಮವಾಗಿ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕೆ. ವೇಲುಸಾಮಿ ಮಂಗಳವಾರ ರಾತ್ರಿ ತಿಳಿಸಿದ್ದಾರೆ.
‘ಸುಮತಿ ಮತ್ತು ದೀಪನ್ ಎಂಬುವರು ಸಹಿ ತಮ್ಮದಲ್ಲ ಎಂದು ಖುದ್ದಾಗಿ ಹೇಳಿಕೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸದ ಕಾರಣ ವಿಶಾಲ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ’ ಎಂದು ವೇಲುಸಾಮಿ ತಿಳಿಸಿದ್ದಾರೆ.
‘ಮೊದಲು ನನ್ನ ನಾಮಪತ್ರ ಅಂಗೀಕರಿಸಿ ನಾನು ಚುನಾವಣಾಧಿಕಾರಿ ಕಚೇರಿಯಿಂದ ಹೊರಟ ಬಳಿಕ ಅದನ್ನು ತಿರಸ್ಕರಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. 2016ರ ಡಿಸೆಂಬರ್ 5: ಅಮ್ಮನ ಸಾವು, 2017ರ ಡಿಸೆಂಬರ್ 5: ಪ್ರಜಾಪ್ರಭುತ್ವದ ಸಾವು’ ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.
Democracy at its lowest low !!
Disheartening to hear that the nomination made by me was initially accepted & later when I left, has been announced as invalid.#PoliticalGame
— Vishal (@VishalKOfficial) December 5, 2017
5th Dec 2016, #Amma died,
— Vishal (@VishalKOfficial) December 5, 2017
5th Dec, 2017, #Democracy died....#SadReality#RIPDemocracy
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.