ಕಲಬುರ್ಗಿ: ‘ರಾಮ, ಹನುಮ ಜಯಂತಿ ಆಚರಣೆಗೆ ಯಾವುದೇ ಆಧಾರ ಇಲ್ಲ. ರಾಮ ಎಂಬುದು ಬಹುಸಂಖ್ಯಾತರ ನಂಬಿಕೆ ಅಷ್ಟೇ. ರಾಮನ ಜಯಂತಿ ಆಚರಣೆಗೆ ಬೇಕಾಗಿರುವ ಹುಟ್ಟಿದ ದಿನಾಂಕ ಯಾರ ಬಳಿಯೂ ಇಲ್ಲ’ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

‘ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಅವರು ರಾಮನ ಅಸ್ತಿತ್ವದ ಪ್ರಶ್ನೆ ಎತ್ತಿದ್ದಾರೆ. ಆದರೆ, ಅವರ ವಿರುದ್ಧ ಎರಡು–ಮೂರು ಕಡೆ ಪ್ರಕರಣ ದಾಖಲಿಸಲಾಗಿದೆ. ದೇವರನ್ನು ಪ್ರಶ್ನಿಸಿದರೆ, ಅಂಥವರನ್ನು ದೋಶದ್ರೋಹಿಗಳು ಎಂದು ಬಿಂಬಿಸುವ ಸನ್ನಿವೇಶ ದೇಶದಲ್ಲಿ ಸೃಷ್ಟಿಯಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ’ ರಾಷ್ಟ್ರೀಯ ಸಮ್ಮೇಳನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಾಹಿತಿಗಳಲ್ಲಿ ಉಪದ್ರವಿ, ನಿರುಪದ್ರವಿ ಲೇಖಕರು ಇದ್ದಾರೆ. ಉಪದ್ರವಿ ಲೇಖಕರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ. ಸರ್ಕಾರದ ನಿಲುವು ಟೀಕಿಸುತ್ತಾರೆ. ಚಂದ್ರಶೇಖರ ಪಾಟೀಲ ಅವರು ಇಂಥ ಉಪದ್ರವಿ ಲೇಖಕರ ನಾಯಕ. ಕೋಮುವಾದಿಗಳಿಗೆ ಮತ ಹಾಕಬೇಡಿ ಎಂದು ಹೇಳುವ ಹಕ್ಕು ಅವರಿಗೆ ಇದೆ’ ಎಂದು ಚಂಪಾ ನಿಲುವುವನ್ನು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.