ಗುರುವಾರ , ಫೆಬ್ರವರಿ 25, 2021
30 °C

ಬಾಲಿವುಡ್‌ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ಆರೋಪ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ಆರೋಪ

ನವದೆಹಲಿ: ವಿಮಾನದಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಿವುಡ್ ನಟಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ.

ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ಏರ್‌ ವಿಸ್ತಾರ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ತಮ್ಮ ಜತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ವಿಮಾನದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರೂ ಅವರು ಸಹಾಯಕ್ಕೆ ಬರಲಿಲ್ಲ ಎಂದು ನಟಿ ವಿಡಿಯೊದಲ್ಲಿ ಕಣ್ಣೀರು ಹಾಕುತ್ತ ಹೇಳಿದ್ದಾರೆ.‘ಆತ ಮೊದಲು ನಾನಿದ್ದ ಸೀಟ್‌ ಪಕ್ಕದಿಂದ ಕಾಲು ಹಾಕಿದ್ದ. ನಾನು ನಿದ್ದೆ ಮಾಡುತ್ತಿದ್ದ ವೇಳೆ ನನ್ನ ಕುತ್ತಿಗೆ ಸವರಿದ. ಮಂದ ಬೆಳಕು ಇದ್ದ ಕಾರಣ ಅದನ್ನು ವಿಡಿಯೊ ಮಾಡಲು ಆಗಲಿಲ್ಲ’ ಎಂದಿರುವ ಅವರು ಸೀಟ್‌ ಪಕ್ಕದಿಂದ ವ್ಯಕ್ತಿ ಕಾಲು ಹಾಕಿರುವ ವಿಡಿಯೊ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಹೆಣ್ಣಿನ ಜತೆ ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅಳುತ್ತ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆದ ಬಳಿಕ ಏರ್‌ ವಿಸ್ತಾರ ವಿಮಾನ ಸಂಸ್ಥೆ ಘಟನೆ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.