ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಏಕದಿನ ಪಂದ್ಯ: ಶ್ರೀಲಂಕಾಗೆ 7 ವಿಕೆಟ್‌ಗಳ ಜಯ

ಧರ್ಮಶಾಲಾ
Last Updated 10 ಡಿಸೆಂಬರ್ 2017, 13:13 IST
ಅಕ್ಷರ ಗಾತ್ರ

ಧರ್ಮಶಾಲಾ:  ಹಿಮಾಚಲ ಪ್ರದೇಶದ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು.

ಟಾಸ್‌ ಗೆದಿದ್ದ ಶ್ರೀಲಂಕಾ ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರತ 38.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 112 ರನ್‌ಗಳನ್ನು ಮಾತ್ರ ಗಳಿಸಿತು. ಸುಲಭದ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 20.4 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 114 ರನ್‌ ಬಾರಿಸಿತು.

ಶ್ರೀಲಂಕಾದ ಉಪುಲ್‌ ತರಂಗ (49) ಅರ್ಧಶತಕದಿಂದ ವಂಚಿತರಾದರು. ಏಂಜೆಲೊ ಮ್ಯಾಥ್ಯೂಸ್(25),  ನಿರೋಷನ್‌ ಡಿಕ್ವೆಲ್ಲಾ (26) ರನ್‌ಗಳನ್ನು ಔಟಾಗದೆ ಗಳಿಸಿ ತಂಡವನ್ನು ಜಯದ ದಡಕ್ಕೆ ತಲುಪಿಸಿದರು.

ಮೊದಲು ಬ್ಯಾಟ್‌ ಮಾಡಿದ ಭಾರತದ ಮಹೇಂದ್ರ ಸಿಂಗ್‌ ದೋನಿ ಹೊರತು ಪಡಿಸಿ ಉಳಿದ ಆಟಗಾರರು ರನ್‌ ಗಳಿಸಲು ಪರದಾಡಿದರು. ಸುರಂಗ ಲಕ್ಮಲ್‌ 4, ನುವಾನ್‌ ಪ್ರದೀಪ್‌ 2 ವಿಕೆಟ್‌ ಕಬಳಿಸಿ ಭಾರತದ ಬ್ಯಾಟಿಂಗ್‌ ಬೇಟೆಗೆ ಕಡಿವಾಣ ಹಾಕಿದರು. ಪ್ರಮುಖ ಆಟಗಾರರಾದ ಶಿಖರ್‌ ಧವನ್‌, ದಿನೇಶ್‌ ಕಾರ್ತಿಕ್‌ ಒಂದೂ ರನ್‌ ಗಳಿಸದೆ ಪೆವಿಲಿಯನ್‌ ಸೇರಿದರು. ಶ್ರೇಯಸ್‌ ಅಯ್ಯರ್, ಮನೀಷ್ ಪಾಂಡೆ ಎರಡಂಕಿಯ ರನ್‌ ಹೊಡೆಯಲಿಲ್ಲ. ಇದರಿಂದಾಗಿ ಸವಾಲಿನ ಮೊತ್ತ ಕಲೆಹಾಕುವಲ್ಲಿ ಭಾರತಕ್ಕೆ ಸಾಧ್ಯವಾಗಲಿಲ್ಲ.

ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ತಂಡವನ್ನು ರೋಹಿತ್‌ ಶರ್ಮಾ  ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT