ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಚುನಾವಣಾ ಪ್ರಣಾಳಿಕೆಯ ಒಪ್ಪಿಗೆ ಬಳಿಕ ರಾಜ್ಯದ ಪ್ರಣಾಳಿಕೆ: ವೀರಪ್ಪ ಮೊಯಿಲಿ

Last Updated 11 ಡಿಸೆಂಬರ್ 2017, 10:17 IST
ಅಕ್ಷರ ಗಾತ್ರ

ಬೆಂಗಳೂರು: ಜನವರಿ 11 ರಂದು ಪ್ರಣಾಳಿಕೆ ಸಮಿತಿಯ ಪ್ರಮುಖ ಸಭೆ ನಡೆಯಲಿದ್ದು, 30 ಜಿಲ್ಲೆಗಳಲ್ಲೂ ನವ ಕರ್ನಾಟಕ ವಿಷನ್ ಸಿದ್ಧಪಡಿಸಲಾಗಿದೆ ಎಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿರುವ ವೀರಪ್ಪ ಮೊಯಿಲಿ ಅವರು ಪ್ರಣಾಳಿಕೆ ಸಮಿತಿ ರಚನೆ ಬಳಿಕ ಆರು ಪ್ರದೇಶಗಳಲ್ಲಿ ಸಭೆ ನಡೆಸುವುದಾಗಿ ಹೇಳಿದರು.

ಎಲ್ಲ ಜಿಲ್ಲೆಗಳ ವಿವಿಧ ವಿಭಾಗಗಳ ಪ್ರತಿನಿಧಿಗಳು ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಪ್ರತಿನಿಧಿಗಳಿಂದಿಗೂ ಚರ್ಚೆ ನಡೆಸಲಿದ್ದೇವೆ. ಸೋಮವಾರ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಯಲಿದೆ ಎಂದರು.

ಬಿ.ಎಲ್.ಶಂಕರ್ ನೇತೃತ್ವದಲ್ಲಿ ಈ ಹಿಂದಿನ ಪ್ರಣಾಳಿಕೆಯ ಪರಾಮರ್ಶೆ ನಡೆಸಲಾಗುತ್ತದೆ. ನಮ್ಮ ಪ್ರಣಾಳಿಕೆ ಜನಪರವಾಗಿರಲಿದೆ. ಆರ್ಥಿಕ, ಸಾಮಾಜಿಕವಾಗಿ ಆಮೂಲಾಗ್ರ ಬದಲಾವಣೆಯಾಗುವ ಐದು ಪ್ರಮುಖ ಕಾರ್ಯಕ್ರಮಗಳಿವೆ. ಕೇಂದ್ರದ ಚುನಾವಣಾ ಪ್ರಣಾಳಿಕೆಯ ಒಪ್ಪಿಗೆ ಬಳಿಕ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT