ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಅರೇಬಿಯಾದಲ್ಲಿ ಸಿನಿಮಾ ಪ್ರದರ್ಶನಕ್ಕೆ ಇನ್ನು ನಿಷೇಧ ಇಲ್ಲ

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಿಯಾದ್‌: ಸೌದಿ ಅರೇಬಿಯಾದಲ್ಲಿ  ಸಿನಿಮಾ ಪ್ರದರ್ಶನದ ಮೇಲೆ ದಶಕಗಳಿಂದ ಹೇರಿದ್ದ ನಿಷೇಧವನ್ನು ಸೋಮವಾರ ತೆಗೆದು ಹಾಕಲಾಗಿದೆ. ಇದು ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಸರಣಿ ಸಾಮಾಜಿಕ ಸುಧಾರಣೆಯ ಮುಂದುವರಿದ ಭಾಗವಾಗಿದೆ. 

ಸೌದಿ ಸರ್ಕಾರವು ಸಿನಿಮಾ ಪ್ರದರ್ಶನಕ್ಕೆ ತಕ್ಷಣದಲ್ಲೇ ಪರವಾನಗಿ ನೀಡಲು ಮುಂದಾಗಿದೆ. ಮುಂದಿನ ಮಾರ್ಚ್‌ನಲ್ಲಿ ಚಿತ್ರಮಂದಿರಗಳು ಸಿನಿಮಾ ಪ್ರದರ್ಶಿಸಲಿವೆ.

ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ಮನರಂಜನಾ ಕ್ಷೇತ್ರವನ್ನು ಉತ್ತೇಜಿಸಲಾಗುತ್ತಿದೆ. ಸಿನಿಮಾಗಳ ಪ್ರದರ್ಶನ ಅಸಹ್ಯ ಮತ್ತು ಪಾತಕ ಎಂಬ ವಿರೋಧಗಳ ನಡುವೆಯೂ ಸುಧಾರಣೆ ತರಲಾಗಿದೆ.

35 ವರ್ಷಗಳ ನಂತರ 2018ರ ಆರಂಭದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಹತೇಕ ಸಾರ್ವಜನಿಕ ಸ್ಥಳಗಳಲ್ಲಿ ಇರುವಂತೆ ಚಿತ್ರಮಂದಿರಗಳಲ್ಲಿಯೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಪ್ರಕಟಿಸಿದೆ.

‘ರಾಜಧಾನಿಯಲ್ಲಿ ಸಾಂಸ್ಕೃತಿಕ ಆರ್ಥಿಕತೆ ಅಭಿವೃದ್ಧಿಪಡಿಸುವುದರಲ್ಲಿ ಈ ಸುಧಾರಣೆ ಮಹತ್ವದ ಪಾತ್ರವಹಿಸಲಿದೆ’ ಎಂದು ಸಚಿವ ಅವ್ವದ್‌ ಅಲವ್ವದ್‌ ತಿಳಿಸಿದ್ದಾರೆ.

ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಯ ಕಾರಣದಿಂದಾಗಿ 1980ರಲ್ಲಿ ಸೌದಿ ಅರೇಬಿಯಾದಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಸಂಗೀತ ಕಚೇರಿ, ಕಾಮಿಕ್‌–ಕಾನ್‌ ಪಾಪ್‌ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT