ಗುರುವಾರ , ಫೆಬ್ರವರಿ 25, 2021
29 °C

ಹಿಂದೂಗಳ ರಕ್ಷಣೆಗೆ ಸರ್ಕಾರ ನಿರ್ಲಕ್ಷ್ಯ: ಮುತಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂಗಳ ರಕ್ಷಣೆಗೆ ಸರ್ಕಾರ ನಿರ್ಲಕ್ಷ್ಯ: ಮುತಾಲಿಕ್

ಯಾದಗಿರಿ: ‘ರಾಜ್ಯದಲ್ಲಿನ ಭಟ್ಕಳ ಪಾಕಿಸ್ತಾನದ ಕೇಂದ್ರ ಸ್ಥಾನವಾಗಿದೆ. ಅದರ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಮುತಾಲಿಕ್ ಹೇಳಿದರು.ನಗರದ ವನಿಕೇರಿ ಲೇಔಟ್‌ನಲ್ಲಿ ಶ್ರೀರಾಮಸೇನೆ ಜಿಲ್ಲಾ ಘಟಕ ಮಂಗಳವಾರ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಭಟ್ಕಳದಲ್ಲಿ ಹಿಂದೂಗಳು ಹೋಗಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಅಲ್ಲಿ ಪಾಕಿಸ್ತಾನದ ಮುಸ್ಲಿಂರಿಂದ ರಾಜ್ಯದಲ್ಲಿನ ಮುಸ್ಲಿಂ ಯುವಕರಿಗೆ ತರಬೇತಿ ನಡೆಯುತ್ತಿದೆ. ಇಷ್ಟ ಬಹಿರಂಗ ಸತ್ಯ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಅದನ್ನು ಸರ್ಕಾರ ತಡೆಗಟ್ಟದಿದ್ದರೆ ಮುಂದೆ ರಾಜ್ಯ ದೊಡ್ಡ ಅನಾಹುತ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಯಾವೊಂದು ರಾಷ್ಟ್ರೀಯ ಪಕ್ಷಗಳಿಗೆ ಹಿಂದೂ ಧರ್ಮ, ಜನರ ಬಗ್ಗೆ ಕನಿಕರ ಇಲ್ಲ. ಹಿಂದೂಗಳನ್ನು ರಕ್ಷಿಸುವ ಬಗ್ಗೆ ಯಾವೊಂದು ಸರ್ಕಾರಗಳು ಮುಂದೆ ಬಂದಿಲ್ಲ. ಹಾಗಾಗಿ, ಶ್ರೀರಾಮಸೇನೆಯಿಂದ ಇನ್ನು ಮುಂದೆ ಶಿವಸೇನಾ ಪಕ್ಷ ಕಟ್ಟಲಿದ್ದೇವೆ’ ಎಂದರು. ‘ಒಂದು ವರ್ಷದಲ್ಲಿ ಮುರು ಸಾವಿರ ಲವ್‌ ಜಿಹಾದ್ ಅನ್ನು ಶ್ರೀರಾಮ ಸೇನೆ ತಡೆಗಟ್ಟಿದೆ. ಕ್ರಿಶ್ಚಿಯನ್‌ ಮತಾಂತರವನ್ನು ನಿಲ್ಲಿಸಿದ್ದೇವೆ. ಈ ಇಂತಹ ಕೆಲಸ ಮಾಡಿರುವುದಕ್ಕೆ ನನಗೆ ದೇಶದ ಹಲವು ಕಡೆ ನನಗೆ ನಿರ್ಬಂಧ ಹೇರಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ಆದರೂ ಮುಖ್ಯಮಂತ್ರಿಗಳಿಗೆ ಹಿಂದೂಗಳಿಗೆ ಅನ್ಯಾಯವಾದರೂ ತುಟಿ ಬಿಚ್ಚಲ್ಲ. ನೀವು ಕೇವಲ ಮುಸ್ಲಿಂ ಮತಗಳಿಂದ ಸಿಎಂ ಆಗಿಲ್ಲ. ಹಿಂದೂಗಳ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ನಡೆಯುತ್ತಿರುವ ಲವ್‌ ಜಿಹಾದ್ ಹಾಗೂ ಮತಾಂತರದ ವಿರುದ್ಧ ಸೆಟೆದು ನಿಂತು ಹಿಂದೂ ಧರ್ಮದ ರಕ್ಷಣೆ ಮಾಡಬೇಕಿದೆ’ ಎಂದು ಆಂದೋಲನಾ ಶ್ರೀ ಕರೆ ನೀಡಿದರು.

ತೆಲಂಗಾಣದ ಕಾಕಿನಾಡ ಶಾಸಕ ರಾಜಾಸಿಂಗ್ ಠಾಕೂರ ಮಾತನಾಡಿ,‘ ಹಿಂದೂ ಅಖಂಡ ರಾಷ್ಟ್ರ ನಿರ್ಮಾಣ ನನ್ನ ಕನಸಾಗಿದೆ. ಇಡೀ ವಿಶ್ವದಲ್ಲಿ ಹಲವಾರು ಕ್ರಿ ಸ್ಚಿಯನ್‌, ಮುಸ್ಲಿಂ ದೇಶಗಳಿವೆ. ಆದರೆ, ಇದ್ದ ಹಿಂದೂ ರಾಷ್ಟ್ರ ನೇಪಾಳವನ್ನು ಚೀನಾ ಆಕ್ರಮಿಸಿಕೊಂಡಿದೆ. ಈಗ ಉಳಿದಿರುವುದು ಭಾರತ. ಭಾರತ ನೂರು ದೇಶಗಳಾಗುವಂತೆ ಹಿಂದೂಗಳ ರಕ್ಷಣೆ ಆಗಬೇಕಿದೆ’ ಎಂದರು.

ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಸೂಗೂರೇಶ್ವರ ಶಿವಾ ಚಾರ್ಯ ಸ್ವಾಮೀಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ  ಇದ್ದರು.

* * 

ಇನ್ನು ಮುಂದೆ ನಾವೂ ರಾಜಕೀಯ ಪಕ್ಷ ಕಟ್ಟಿ ಹಿಂದೂಗಳ ರಕ್ಷಣೆಗೆ ಮುಂದಾಗುತ್ತೇವೆ. ಹಿಂದೂಗಳು ಪಕ್ಷದ ಮೇಲೆ ಆಶೀರ್ವಾದ ಮಾಡಬೇಕು.

ಪ್ರಮೋದ್ ಮುತಾಲಿಕ್

ಅಧ್ಯಕ್ಷ,  ಶ್ರೀರಾಮ ಸೇನೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.