ಸೋಮವಾರ, ಜೂಲೈ 6, 2020
21 °C
ಹಲವಾರು ಸಿಹಿ ಕಹಿ ಸಂಗತಿಗಳು- ಹೊಸ ವರ್ಷಕ್ಕೆ ನವೋಲ್ಲಾಸ

2017ನೇ ವರ್ಷದ ಪ್ರಮುಖ ಸಂಗತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2017ನೇ ವರ್ಷದ ಪ್ರಮುಖ ಸಂಗತಿಗಳು

ಚಿಕ್ಕಮಗಳೂರು: ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಹಲವಾರು ಸಿಹಿಕಹಿ ಸಂಗತಿಗಳು ನಡೆದಿವೆ. 2017ನೇ ವರ್ಷದ ಪ್ರಮುಖ ಸಂಗತಿಗಳ ಹಿನ್ನೋಟ...

* ಜ.3: ನಗರದ ಹೊರವಲಯದ ಸೆರಾಯ್‌ ರೆಸಾರ್ಟ್‌ನಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ತೀವ್ರ ಹೃದಯಾಘಾತದಿಂದ ಸಾವು.

*  ಜ.9: ಜಿಲ್ಲೆಯ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಗಾಲ್ಫ್ ಟೂರ್ನಿಯ ದಿ ಬ್ರಿಗೇಡ್ ಕಪ್ ಓಪನ್ ವಿಭಾಗದಲ್ಲಿ ಆರ್.ಬಿ.ಸಿ.ನಾಯರ್ ಪ್ರಥಮ ಸ್ಥಾನ ಗಳಿಸಿದರು.

* ಜ.29: ಜಿಲ್ಲೆಯಲ್ಲಿ ಸುಮಾರು 33 ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಮಾಜಿ ಮುಖಂಡ ಪ್ರವೀಣ್‌ ಖಾಂಡ್ಯ ಬಂಧನ.

* ಫೆ.5: ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ನಡೆಸುತ್ತಿದ್ದ ಆರೋಪದಡಿ 6 ಆರೋಪಿಗಳ ಬಂಧನ.

* ಫೆ.21: ಭದ್ರಾ ಅಭಯಾರಣ್ಯ ಮುತ್ತೋಡಿ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ಮುತ್ತೋಡಿ ಪ್ರಾದೇಶಿಕ ವಲಯದ ಅತ್ತಿಗುಂಡಿ ವಿಭಾಗದಲ್ಲಿ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಹುಲ್ಲುಗಾವಲು ಆಹುತಿ.

* ಫೆ 28: ಮೂಗತಿಹಳ್ಳಿ–ಶಿರಗುಂದ ಬಳಿ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ; ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ, ಯುವಕರ ಗುಂಪಿನಿಂದ ಪಿಎಸ್‌ಐಗೆ ಥಳಿತ.

* ಮಾ.13: ತಾಲ್ಲೂಕಿನ ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಸಂದಲ್‌ ಉರೂಸ್‌ ಆಚರಣೆ.

* ಮಾ.27:  ಕನ್ನಡ ಮತ್ತು ಉರ್ದು ಸಾಹಿತ್ಯದ ಕೊಂಡಿಯಾಗಿದ್ದ ಉರ್ದು ಕವಿ, ರಾಜಕಾರಣಿ ಎಂ.ಬಿ.ಘನಿ ನಿಧನ.

* ಮೇ 4: ಕಾಫಿ ಮಂಡಳಿಯ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಎಸ್‌. ಭೋಜೇಗೌಡ ನೇಮಕ.

* ಜೂನ್‌ 5: ನಕ್ಸಲ್‌ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಮೂಡಿಗೆರೆ ತಾಲ್ಲೂಕಿನ ಹಳುವಳ್ಳಿಯ ಕನ್ಯಾಕುಮಾರಿ ಅಲಿಯಾಸ್‌ ಸುವರ್ಣಾ, ಗದಗ ಜಿಲ್ಲೆಯ ಚೆನ್ನಮ್ಮ ಅಲಿಯಾಸ್‌ ಸುಮಾ, ಬೆಂಗಳೂರಿನ ಶಿವು ಅಲಿಯಾಸ್‌ ಜ್ಞಾನದೇವ್‌ ಜಿಲ್ಲಾಡಳಿತದ ಮುಂದೆ ಶರಣಾಗತಿ.

* ಜುಲೈ 4: ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್‌.ರೋಷನ್‌ ಬೇಗ ನೇಮಕ.

* ಆ.16: ನಗರದ ರಾಮನಹಳ್ಳಿಯ ಡಯಟ್‌ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ.

* ಆ.28: ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಐಟಿಸಿ ಸಂಸ್ಥೆಯೊಂದಿಗೆ ನಗರಸಭೆ ಒಪ್ಪಂದ.

* ಸೆ.17: ನಗರಸಭೆ ಕಚೇರಿ ಸಭಾಂಗಣದಲ್ಲಿ ವಾಸ್ತು, ಸುದರ್ಶನ ಹೋಮ, ಹವನ ಪೂಜಾ ಕೈಂಕರ್ಯ.

* ಸೆ.21: ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಲೆಕ್ಕಪತ್ರ ಪರಿಶೀಲನೆ.

* ಅ.7: ನರಸಿಂಹರಾಜಪುರ ತಾಲ್ಲೂಕಿನ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆ ಆರಂಭ.

* ಅ.7:  ನಗರಸಭೆ ಅಧ್ಯಕ್ಷರಾಗಿ ಶಿಲ್ಪಾರಾಜಶೇಖರ್ ಅವಿರೋಧವಾಗಿ ಆಯ್ಕೆ.

* ಅ.7: ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಕೋಲಾರ ಜಿಲ್ಲೆಗೆ ವರ್ಗಾವಣೆ.

* ಅ.8: ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ದಾಖಲೆ ಸೃಷ್ಟಿಸಿದ ಪೌಲ್ ಗಿಬ್ಲಿನ್‌.

* ಅ.9: ಜಿಲ್ಲಾಧಿಕಾರಿಯಾಗಿ ಎಂ.ಕೆ.ಶ್ರೀರಂಗಯ್ಯ ಅಧಿಕಾರ ಸ್ವೀಕಾರ.

* ಅ.15: ಕರಗಡ ನೀರಾವರಿ ಯೋಜನೆ– ವ್ಯಾಪ್ತಿಯ ದೇವಿಕೆರೆ ಗೇಟ್‌ ವಾಲ್ವ್‌ ಎತ್ತಿ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.

* ಅ.18: ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವ ಸಂಭ್ರಮ.

* ನ.4: ನಗರಸಭೆ ಉಪಾಧ್ಯಕ್ಷರಾಗಿ ಎಂ.ಶ್ರೀನಿವಾಸರಾವ್‌ ಅವಿರೋಧವಾಗಿ ಆಯ್ಕೆ.

* ನ.7: ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಜಿಲ್ಲಾ ಮತಗಟ್ಟೆ ಸಮಿತಿ ಅಧ್ಯಕ್ಷರ ಸಮಾವೇಶ.

* ನ.7: ತಾಲ್ಲೂಕಿನ ಮುಗುಳುವಳ್ಳಿಯ ದಲಿತರ ಮನೆಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಾಸ್ತವ್ಯ.

* ನ.19: ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ಅಂಗವಾಗಿ ಶೋಭಾಯಾತ್ರೆ, ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.

* ನ.24: ಏಷ್ಯಾ ಫೆಸಿಫಿಕ್‌ ಕಾರ್‌ ರ್‌್ಯಾಲಿಯ ಐದನೇ ಮತ್ತು ಅಂತಿಮ ಸುತ್ತಿನ ಸ್ಪರ್ಧೆ ಆರಂಭ.

* ನ.26: ಏಷ್ಯಾ ಪೆಸಿಫಿಕ್‌ ಕಾರ್‌ ರ್‌್ಯಾಲಿಯಲ್ಲಿ ಎಂಆರ್‌ಎಫ್‌ ತಂಡದ ಅಗ್ರ ಶ್ರೇಯಾಂಕದ ಚಾಲಕ ದೆಹಲಿಯ ಗೌರವ್‌ಗಿಲ್‌ಗೆ ಚಾಂಪಿಯನ್‌ಶಿಪ್‌.

* ಡಿ.1: ಅನಸೂಯ ದೇವಿ ಜಯಂತಿ ಆಚರಣೆ, ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.

* ಡಿ.2: ದತ್ತ ಜಯಂತಿ ಉತ್ಸವ ಅಂಗವಾಗಿ ಶೋಭಾಯಾತ್ರೆ.

* ಡಿ.3: ದತ್ತ ಜಯಂತಿ ಉತ್ಸವ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣದ ನಿಷೇಧಿತ ಪ್ರದೇಶಕ್ಕೆ ದತ್ತಭಕ್ತರೊಬ್ಬರು ನುಗ್ಗಿ ಭಗವಧ್ಜಜ ನೆಟ್ಟರು. ಗೋರಿಗೆ ನೆಟ್ಟಿದ್ದ ನಾಮಫಲಕಕ್ಕೆ ಹಾನಿ. ಉದ್ರಿಕ್ತ ವಾತಾವರಣ. ನಗರದ ತಮಿಳು ಕಾಲೋನಿಯಲ್ಲಿ ಪೆಟ್ರೋಲ್‌ ಬಾಂಬ್‌ ವಶ.

* ಡಿ.28,29: ಕರ್ನಾಟಕ ಕೋಮುಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ‘ಸೌಹಾರ್ದ ಮಂಟಪ: ಹಿಂದಣ ನೋಟ– ಮುಂದಣ ಹೆಜ್ಜೆ’ ರಾಷ್ಟ್ರೀಯ ಸಮಾವೇಶ.

* ಡಿ.30: ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾರಂಭ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.