ಶುಕ್ರವಾರ, ಆಗಸ್ಟ್ 14, 2020
23 °C

ಅಹಿಂದ ವೇದಿಕೆ ನೂತನ ಘಟಕ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ 12ನೇ ವಾರ್ಡ್‌ನಲ್ಲಿ ಭಾನುವಾರ ಅಹಿಂದ ಯುವ ವೇದಿಕೆಯ ನೂತನ ಘಟಕವನ್ನು ರಚಿಸಿ, ಪಿ. ಖಾಜಾ ಹುಸೇನ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ನಗರಸಭೆ ಸದಸ್ಯ ರೌಫ್‌ ಮಾತನಾಡಿ, ‘ಅಹಿಂದ ವೇದಿಕೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಮಾಜದ ಏಳಿಗೆಗೆ ಅವಿರತ ಶ್ರಮಿಸಬೇಕು’ ಎಂದರು. ಕೆ. ಗೌಸ್‌ ಮಾತನಾಡಿ, ‘ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿ ವೇದಿಕೆಯನ್ನು ಬಲಿಕೊಡಬಾರದು’ ಎಂದು ತಿಳಿಸಿದರು. ವೇದಿಕೆ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ಪ್ರಮುಖರಾದ ಚೇತನರಾಜ್‌, ಶಫಿ ಬರಕಾತಿ, ರಘುನಂದನ, ಟಿ. ಜಂಬಯ್ಯ, ಬದ್ರಿನಾಥ, ಬಾಷಾ, ಕೆ.ರವಿ, ಪಿ. ಬಸವರಾಜ, ಎಚ್‌. ಪಂಪಾ, ಸಿ. ಕೊಟ್ರೇಶ್‌, ಡಿ. ರಾಮಚಂದ್ರ ಇದ್ದರು.

ಪದಾಧಿಕಾರಿಗಳ ವಿವರ ಇಂತಿದೆ: ಡಿ.ವಲಿ (ಗೌರವಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ) ಪಿ.ಕೆ.ರೆಹಮಾನ್, ಎಂ.ಜಾಕೀರ್, ಡಿ. ನಜೀರ್ (ಉಪಾಧ್ಯಕ್ಷರು),ಆಮದ್ ಹಾಗೂ ಶರ್ಮಾಸ್ (ಸಂಘಟನಾ ಕಾರ್ಯದರ್ಶಿ), ಟಿ ಮೈಲಾ, ಹೊನ್ನೂರು, ಡಿ.ಮೋಹಿದ್ದೀನ್, ಡಿ.ರಾಜು, ಟಿ.ವಿಜಯಕುಮಾರ್, ಡಿ ಜಾಫರ್, ಪಿ.ಮೆಹಬೂಬ್ ,ಹುಸೇನ್ ಬೀ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.