ನೆರವಿಗೆ ಬದಲಾಗಿ ಸುಳ್ಳು ನೀಡುತ್ತಿರುವ ಪಾಕಿಸ್ತಾನ: ಡೊನಾಲ್ಡ್‌ ಟ್ರಂಪ್‌

7
ಪಾಕ್‌ಗೆ ನೆರವು ಸ್ಥಗಿತದ ಸುಳಿವು

ನೆರವಿಗೆ ಬದಲಾಗಿ ಸುಳ್ಳು ನೀಡುತ್ತಿರುವ ಪಾಕಿಸ್ತಾನ: ಡೊನಾಲ್ಡ್‌ ಟ್ರಂಪ್‌

Published:
Updated:
ನೆರವಿಗೆ ಬದಲಾಗಿ ಸುಳ್ಳು ನೀಡುತ್ತಿರುವ ಪಾಕಿಸ್ತಾನ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ನೀಡುತ್ತಿರುವ ಅಪಾರ ನೆರವಿಗೆ ಬದಲಾಗಿ ಪಾಕಿಸ್ತಾನ ಸುಳ್ಳನ್ನು ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸೋಮವಾರ ಹೊಸ ವರ್ಷದ ಶುಭಾಶಯದ ಟ್ವೀಟ್‌ ಬಳಿಕ ಮಾಡಿರುವ ಟ್ವೀಟ್‌ನಲ್ಲಿ ಟ್ರಂಪ್‌ ಪಾಕಿಸ್ತಾನದ ವಿರುದ್ಧದ ಕಿಡಿಕಾರಿದ್ದಾರೆ.

‘ಅಮೆರಿಕವು ಮೂರ್ಖತನದಿಂದ 15 ವರ್ಷಗಳಿಂದ ಪಾಕಿಸ್ತಾನಕ್ಕೆ 33 ಬಿಲಿಯನ್‌ ಡಾಲರ್‌ಗೂ ಹೆಚ್ಚು ನೆರವು ನೀಡುತ್ತಾ ಬಂದಿದೆ. ಪಾಕಿಸ್ತಾನ ಇದಕ್ಕೆ ಬದಲಾಗಿ ನಮಗೆ ನೀಡಿರುವುದು ಸುಳ್ಳು ಮತ್ತು ಕೃತಘ್ನತೆಯನ್ನು ಮಾತ್ರ. ಇದನ್ನು ನೋಡಿದರೆ ನಮ್ಮ ನಾಯಕರು ಎಂಥ ಮೂರ್ಖರು ಎಂಬುದು ಗೊತ್ತಾಗುತ್ತದೆ. ಅವರು ಉಗ್ರರಿಗೆ ರಕ್ಷಣೆ ನೀಡುತ್ತಿದ್ದಾರೆ. ಆಫ್ಗಾನಿಸ್ತಾನದಲ್ಲಿ ಉಗ್ರರನ್ನು ಬೇಟೆಯಾಡಲು ಸ್ವಲ್ಪ ಪ್ರಮಾಣದಲ್ಲಿ ಅವರ ಸಹಾಯ ಸಿಕ್ಕಿದೆ ಅಷ್ಟೆ. ಮತ್ತೇನೂ ಇಲ್ಲ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry