ಬುಧವಾರ, ಆಗಸ್ಟ್ 5, 2020
23 °C

ಸೌದಿ, ಯುಎಇಯಲ್ಲಿ ವ್ಯಾಟ್‌ ಜಾರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೌದಿ, ಯುಎಇಯಲ್ಲಿ ವ್ಯಾಟ್‌ ಜಾರಿ

ದುಬೈ: ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಒಕ್ಕೂಟವು (ಯುಎಇ) ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್‌) ಸೋಮವಾರದಿಂದ ಜಾರಿಗೆ ತಂದಿದೆ.

ತೆರಿಗೆ ಮುಕ್ತ ಕೊಲ್ಲಿ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ವ್ಯಾಟ್‌ ಜಾರಿಗೆ ಬರುತ್ತಿದೆ. ಸೌದಿ ಅರೇಬಿಯಾವು ಪೆಟ್ರೋಲ್‌ ದರದಲ್ಲಿ ಶೇ127ರಷ್ಟು ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ವರ್ಷದಲ್ಲೆ ಹೊಡೆತ ನೀಡಿದೆ.

ಕಳೆದ ಎರಡು ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳ ತೈಲ ಉತ್ಪಾದಕರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಆದಾಯ ಹೆಚ್ಚಿಸುವ ಸಲುವಾಗಿ  ದರ ಏರಿಕೆ ಮಾಡಿದೆ. ಬಹರೈನ್‌, ಕುವೈತ್‌,ಒಮಾನ್‌ ಮತ್ತು ಕತ್ತರ್‌ ಕೂಡ ವ್ಯಾಟ್‌ ಜಾರಿಗೆ ಚಿಂತನೆ ನಡೆಸಿದ್ದು, ಅದನ್ನು 2019ರ ವರೆಗೆ ಮುಂದೂಡಿದೆ.

ಯಾವುದೇ ಕೊಲ್ಲಿ ರಾಷ್ಟ್ರಗಳು ಇದುವರೆಗೂ ವೈಯಕ್ತಿಕ ಆದಾಯ ತೆರಿಗೆಯನ್ನು ವಿಧಿಸಿಲ್ಲ. ಈ ಕುರಿತು ಚಿಂತನೆ ಕೂಡ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಸೌದಿ ಅರೇಬಿಯಾದಲ್ಲಿ ತೈಲದ ಮೇಲಿನ ಸುಂಕವನ್ನು ಎರಡು ವರ್ಷದಲ್ಲಿ ಎರಡನೇ ಬಾರಿ ಏರಿಕೆ ಮಾಡಿದ್ದರೂ ಜಗತ್ತಿನಲ್ಲೇ ಅತಿ ಕಡಿಮೆ ತೈಲ ಬೆಲೆ ಇಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.