ಸಿ.ಎಂ ವಿರುದ್ಧ ಎಸಿಬಿಗೆ ದೂರು

7

ಸಿ.ಎಂ ವಿರುದ್ಧ ಎಸಿಬಿಗೆ ದೂರು

Published:
Updated:
ಸಿ.ಎಂ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ‘ಪಕ್ಷದ ಸಾಧನೆಗಳ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಬಾಹಿರವಾಗಿ ₹ 129 ಕೋಟಿ ವೆಚ್ಚ ಮಾಡಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಬಿ. ಗಣೇಶ್ ಸಿಂಗ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸೋಮವಾರ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಏನೇನು ಸಾಧನೆ ಮಾಡಿದೆ ಎಂಬ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅದರಲ್ಲಿ ಎಐಸಿಸಿ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಾಲಿ ಅಧ್ಯಕ್ಷ ರಾಹುಲ್ ಗಾಂಧಿ ಭಾವಚಿತ್ರಗಳಿವೆ. ಈ ಜಾಹೀರಾತುಗಳಿಗೆ ಪಕ್ಷದಿಂದ ಹಣ ನೀಡಬೇಕಿತ್ತು. ಆದರೆ, ಸರ್ಕಾರದಿಂದ ಭರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಬಿಎಂಪಿ ಅನುಮತಿ ಪಡೆಯದೇ ಬೆಂಗಳೂರಿನ 489 ಬಸ್‌ ನಿಲ್ದಾ ಗಳಲ್ಲಿ ಸರ್ಕಾರದ ಸಾಧನೆಗಳನ್ನು ನಾಲ್ಕೂವರೆ ವರ್ಷಗಳಿಂದ ಪ್ರಚಾರ ಮಾಡಲಾಗುತ್ತಿದೆ. ಪಾಲಿಕೆಗೆ  ಸಿದ್ದರಾಮಯ್ಯ ₹ 13 ಕೋಟಿ ಪಾವತಿಸಬೇಕಿದೆ. ಈ ಸಂಬಂಧ ಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು ಎರಡು ಬಾರಿ ನೋಟಿಸ್‌ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry