ಸಿಂಧನೂರು ಬಂದ್ ಹಿಂದಕ್ಕೆ

7

ಸಿಂಧನೂರು ಬಂದ್ ಹಿಂದಕ್ಕೆ

Published:
Updated:

ಸಿಂಧನೂರು: ವಿಜಯಪುರದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನ ಬದಲಾವಣೆ ಕುರಿತು ನೀಡಿರುವ ಹೇಳಿಕೆ ವಿರೋಧಿಸಿ ಜನವರಿ 3ರಂದು ಕರೆ ನೀಡಿದ್ದ ಸಿಂಧನೂರು ಬಂದ್‌ ಹಿಂಪಡೆಯಲಾಗಿದೆ ಎಂದು ದಲಿತಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಬೊಮ್ಮನಾಳ, ದಲಿತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಲಗುಮಪ್ಪ ಗೊರೇಬಾಳ ತಿಳಿಸಿದ್ದಾರೆ.

‘ಜ.2ರಂದು ಅಂಬಾದೇವಿ ರಥೋತ್ಸವ ಇದೆ. ಬಂದ್‌ನಿಂದ ಸಾರ್ವಜನಿಕರಿಗೆ, ಭಕ್ತರಿಗೆ ತೊಂದರೆಯಾಗುತ್ತದೆ. ಬಂದ್ ಕರೆ ವಾಪಸ್‌ಗೆ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ ಕಮ್ಮಾರ ಹೇಳಿದ್ದರು. ಜ.3ರ ಬದಲು ಜ.5ರಂದು ಬಸ್ ನಿಲ್ದಾಣ ಪಕ್ಕದಲ್ಲಿನ ಅಂಬಾದೇವಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ವೃತ್ತದಲ್ಲಿ ರಸ್ತೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದು ಅವತು ತಿಳಿಸಿದ್ದಾರೆ. ‘ಪ್ರಗತಿಪರ, ದಲಿತಪರ ಮುಖಂಡರು, ವಿದ್ಯಾರ್ಥಿ, ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry