ಸಿಪಿಎಂ 22ನೇ ರಾಜ್ಯ ಸಮ್ಮೇಳನ

7

ಸಿಪಿಎಂ 22ನೇ ರಾಜ್ಯ ಸಮ್ಮೇಳನ

Published:
Updated:
ಸಿಪಿಎಂ 22ನೇ ರಾಜ್ಯ ಸಮ್ಮೇಳನ

ಮೂಡುಬಿದಿರೆ: ಸಿಪಿಎಂ 22ನೇ ರಾಜ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಅಲಂಗಾರ್ ಜಂಕ್ಷನ್ ನಿಂದ ಸ್ವರಾಜ್ಯ ಮೈದಾನಕ್ಕೆ ಬೃಹತ್ ಮೆರವಣಿಗೆ ಸಾಗಿ ಬರುತ್ತಿದೆ.

ಸಿಪಿಎಂ ರಾಜ್ಯ ಕಾರ್ಯದರ್ಶಿ ‌ಜಿ.ವಿ.ಶ್ರೀರಾಮ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸೇರಿದಂತೆ ಪಕ್ಷದ ಹಲವು ನಾಯಕರು ಮೆರವಣಿಗೆ ನೇತೃತ್ವ ವಹಿಸಿದ್ದಾರೆ. ಸಿಪಿಎಂ ಮತ್ತು ಪಕ್ಷದ ಸಹವರ್ತಿ ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು ಕೆಂಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಬ್ಯಾಂಡ್ ತಂಡಗಳು ಮೆರವಣಿಗೆಗೆ ರಂಗು ತುಂಬಿವೆ.

ಮೆರವಣಿಗೆ ಮುಗಿದ‌ ಬಳಿಕ ಸ್ವರಾಜ್ ಮೈದಾನದಲ್ಲಿ ಬಹಿರಂಗ ಸಮ್ಮೇಳನ ನಡೆಯಲಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ‌ಸೀತಾರಾಂ ಯೆಚೂರಿ ಪ್ರಧಾನ ಭಾಷಣ ಮಾಡುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry