ಶುಕ್ರವಾರ, ಜೂಲೈ 10, 2020
22 °C

ಮಹದಾಯಿ: ಮುಖ್ಯಮಂತ್ರಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಮತ್ತೊಮ್ಮೆ ನಿಯೋಗ ಕೊಂಡೊಯ್ಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಒತ್ತಾಯಿಸಿದ್ದಾರೆ.

‘ನಿಯೋಗ ಕೊಂಡೊಯ್ಯುವ ಬಗ್ಗೆ ಜನವರಿ 3ರೊಳಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಬೆಂಗಳೂರಿ ನಲ್ಲಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸಿ, ರೈತರ ಶಕ್ತಿ ಪ್ರದ ರ್ಶನ ಮಾಡಲಾಗುವುದು’ ಎಂದು ಎಚ್ಚರಿಸಿದರು. ಮಹದಾಯಿ ಧರಣಿಯ 902ನೇ ದಿನವಾದ ಸೋಮವಾರ ಮಾತನಾಡಿದರು.

‘ಮಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ನರಗುಂದದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಜ.3 ರಂದು ನಡೆಸಲಾಗುವುದು. ಎಷ್ಟೇ ಅಡೆತಡೆ ಎದುರಾದರೂ ಹೋರಾಟ ನಿರಂತರವಾಗಿ ಮುಂದುವರಿದಿದೆ. ಮುಂದೆಯೂ ಏನೇ ಸಂಕಷ್ಟ ಬಂದರೂ ಧೃತಿಗೆಡುವ ಪ್ರಶ್ನೆಯೇ ಇಲ್ಲ’ ಎಂದರು.

‘ಮಹದಾಯಿ ಹೋರಾಟ ಸಾಕಷ್ಟು ಏಳು ಬೀಳುಗಳನ್ನುಕಂಡಿದೆ. ಏನೇ ಸಂಕಷ್ಟ ಬಂದರೂ ಧೃತಿಗೆಡುವ ಪ್ರಶ್ನೆಯೇ ಇಲ್ಲ’ಎಂದು ವೀರೇಶ ಸೊಬರದಮಠ ಹೇಳಿದರು. ‘ಮಹದಾಯಿ ಹೋರಾಟದಲ್ಲಿ ರೈತರು ಸೈನಿಕರಿದ್ದಂತೆ. ಸೈನಿಕರಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಆದರೆ, ಅವುಗಳನ್ನು ಸಹಿಸಿಕೊಂಡು ಮುಂದೆ ಸಾಗುತ್ತಾರೆ. ಹಾಗೆಯೇ ನಮ್ಮ ಗುರಿ ಒಂದೇ, ಮಲಪ್ರಭಾಕ್ಕೆ ಮಹದಾಯಿ ನೀರು ಹರಿಯಬೇಕು. ಅಲ್ಲಿಯವರೆಗೆ ರೈತರು ಒಂದಾಗಿ ಹೋರಾಟ ನಡೆಸಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.