ಗುರುವಾರ , ಆಗಸ್ಟ್ 13, 2020
27 °C

ಯೋಗವೇ ಅನುಪಮಾ ಅಂದದ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗವೇ ಅನುಪಮಾ ಅಂದದ ಗುಟ್ಟು

‘ಪ್ರೇಮಂ’ (ಮಲಯಾಳಂ) ಮತ್ತು ‘ಶತಮಾನಂಭವತಿ’ (ತೆಲುಗು) ನೋಡಿರುವವರಿಗೆ ಅನುಪಮಾ ಪರಮೇಶ್ವರನ್ (ಜನ್ಮದಿನ: ಫೆಬ್ರುವರಿ 18, 1996) ಪರಿಚಿತ ಹೆಸರು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಾಲುಸಾಲು ಅವಕಾಶಗಳನ್ನು ದಕ್ಕಿಸಿಕೊಂಡಿರುವ ಅನುಪಮಾ ಸಪೂರ ಕಾಯದ ಚೆಲುವೆ.

ಗುಂಗುರು ಕೂದಲಿನ ಈ ಸಹಜ ಸುಂದರಿ ಮೊದಲ ಸಿನಿಮಾದಲ್ಲೇ ದಕ್ಷಿಣ ಭಾರತದಲ್ಲಿ ಸದ್ದು ಮಾಡಿದವರು. ಮುಗ್ಧತೆ ಹಾಗೂ ಸೌಂದರ್ಯದ ಮಿಶ್ರಣದಂತಿರುವ ಅನುಪಮಾ ಈಗ ಪಡ್ಡೆ ಹುಡುಗರ ಫೇವರಿಟ್‌. ನಟನೆಯಲ್ಲೂ ಅವರು ಎತ್ತಿದ ಕೈ. ‘ಪ್ರೇಮಂ’ನಲ್ಲಿ ಹೈಸ್ಕೂಲು ಹುಡುಗಿಯಾಗಿ ಅಭಿಮಾನಿಗಳ ಹೃದಯ ಕದ್ದಿದ್ದ ಅವರು, ‘ಶತಮಾನಂಭವತಿ’ಯಲ್ಲಿ ಡಾನ್ಸ್‌ನಲ್ಲೂ ಸೈ ಎನಿಸಿಕೊಂಡಿದ್ದರು.

ಸಣ್ಣ ವಯಸ್ಸಿನಿಂದಲೂ ತೆಳ್ಳಗಿರುವ ಇವರು ಫಿಟ್‌ನೆಸ್‌ಗಾಗಿ ಹೆಚ್ಚು ಕಷ್ಪಪಡುವುದಿಲ್ಲ. ಪ್ರತಿದಿನ ಒಂದು ಗಂಟೆ ಯೋಗ ಮಾಡುತ್ತಾರೆ. ದೇಹದ ಆರೋಗ್ಯ ಹಾಗೂ ಮನಸ್ಥಿತಿಗೆ ಯೋಗ ಮುಖ್ಯ ಎಂದು ಹೇಳುವ ಅವರು ಮನಸಲ್ಲಿ ಎಷ್ಟೇ ಚಿಂತೆ ಇದ್ದರೂ ಯೋಗದಿಂದ ಮನಸು ಪ್ರಫುಲ್ಲವಾಗುತ್ತದೆ ಎಂದು ಹೇಳುತ್ತಾರೆ. ಯಾವುದಾದರೊಂದು ರೀತಿಯಲ್ಲಿ ದೇಹಕ್ಕೆ ವ್ಯಾಯಮ ಸಿಗಬೇಕು ಎಂದು ಹೇಳುವ ಅವರು ಸಮಯ ಸಿಕ್ಕಾಗಲೆಲ್ಲಾ ವಾಕಿಂಗ್‌ ಮಾಡುತ್ತಾರೆ. ಹಾಡುಗಾರಿಕೆ ಕೂಡ ಅನುಪಮಾ ಅವರ ನೆಚ್ಚಿನ ಹವ್ಯಾಸ.

ಕೇರಳದ ಸಾಂಪ್ರದಾಯಿಕ ಅಡುಗೆಯನ್ನು ಇಷ್ಟಪಡುವ ಅನುಪಮಾ ಅವರಿಗೆ ಸಾಂಬಾರ್‌ ಇಡ್ಲಿ ಹಾಗೂ ಅಪ್ಪಂ ಅಂದ್ರೆ ತುಂಬ ಇಷ್ಟ. ಆದರೆ ಎಣ್ಣೆ ಬಳಸಿದ ಆಹಾರ, ಜಂಕ್‌ ಫುಡ್‌ ತಿನ್ನೋದಿಲ್ಲ. ಮನೆ ಊಟ, ತರಕಾರಿ ಜ್ಯೂಸ್‌, ಹೆಚ್ಚು ನೀರು ಕುಡಿಯುತ್ತಾರೆ.

ಸೌಂದರ್ಯದ ಜೊತೆ ಆರೋಗ್ಯವೂ ವ್ಯಕ್ತಿಗೆ ಬಹುಮುಖ್ಯ. ಮಿತವಾಗಿ ಹೊಟ್ಟೆಗೆ ಬೇಕಾದಷ್ಟೇ ಆಹಾರ ಸೇವಿಸಬೇಕು. ಹೊಟ್ಟೆ ತುಂಬಿದ ಮೇಲೂ ಬಾಯಿ ರುಚಿಯೆನ್ನಿಸುತ್ತದೆ ಎಂದು ತಿನ್ನುವುದಲ್ಲ. ಅನಾರೋಗ್ಯ ಕಾಡುವ ಆಹಾರ ಪದ್ಧತಿ ಅನುಕರಣೆ ಸಲ್ಲದು ಎಂಬುದು ಅನುಪಮಾ ಡಯೆಟ್‌ ಸೂತ್ರ.

‘ಡಯೆಟ್‌ ಎಂದು ವಿಪರೀತ ಬಾಯಿಕಟ್ಟಿದರೆ ಅಪೌಷ್ಟಿಕತೆಯಿಂದ ಬಳಲಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಮಾತು ಹೇಳಲು ಅವರು ಮರೆಯುವುದಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.