ವಿರೋಧ ಸರಿಯಲ್ಲ

7

ವಿರೋಧ ಸರಿಯಲ್ಲ

Published:
Updated:

‘ಪದ್ಮಾವತಿ’ (ಅಲ್ಲ ‘ಪದ್ಮಾವತ್‌’) ಚಿತ್ರಕ್ಕೆ ಅನುಮತಿ ನೀಡಲು ಸಿಬಿಎಫ್‌ಸಿ ನಿರ್ಧರಿಸಿದೆ. ಐತಿಹಾಸಿಕ ಅಥವಾ ಹಾಗೆಂದು ಬಿಂಬಿಸಲಾಗುವ ಘಟನೆಗಳು ಜೀವನ ಮೌಲ್ಯ ಮತ್ತು ಒಂದು ಕಾಲದ ಜೀವನಶೈಲಿಯ ಪ್ರತಿಪಾದನೆಯೇ ಹೊರತು ಯಥಾವತ್ ಘಟನೆಗಳಲ್ಲ ಎಂಬ ನಿಲುವನ್ನು ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎತ್ತಿಹಿಡಿದಿದೆ. ಇದು ರಾಮಾಯಣ, ಮಹಾಭಾರತ ಮಹಾಕಾವ್ಯಗಳಿಗೂ ಅನ್ವಯಿಸುವಂಥದ್ದು. ಅವನ್ನು ಯಥಾವತ್ ಎಂದು ನಂಬುವ ಅಪ್ರಬುದ್ಧತೆ ಆಧುನಿಕ ಕಾಲದವರೆಗೂ ಮುಂದುವರೆದು ಬಂದಿದೆ!

ಪದ್ಮಾವತಿ ಎಂಬ ಮಹಾರಾಣಿಯೊಬ್ಬಳು ಇತಿಹಾಸದಲ್ಲಿ ಇದ್ದಿರಬಹುದು. ಆಕೆ ಬೆಂಕಿಯಲ್ಲಿ ದಹಿಸಿಕೊಂಡಿರಬಹುದಾದರೂ ಆ ಘಟನೆ, ಮಲಿಕ್ ಮೊಹಮ್ಮದ್ ಜಯಸಿ ರಚಿಸಿರುವ ಕಾವ್ಯದ ಮಾದರಿಯಲ್ಲೇ ಜರುಗಿರುವುದಿಲ್ಲ. ಐತಿಹ್ಯಗಳಿಂದ ಕವಿ ಸ್ಫೂರ್ತಿ ಪಡೆದಿದ್ದಾನು. ಸಂಜಯ್ ಲೀಲಾ ಬನ್ಸಾಲಿ ಈ ಚಲನಚಿತ್ರಕ್ಕೆ ಆ ಕಾವ್ಯದಿಂದ ಪ್ರೇರಣೆ ಪಡೆದಿರಬಹುದು. ಜನರ ಅಂದಂದಿನ ನಂಬಿಕೆ, ಸಾಹಸ, ಸಾಧನೆ... ಹಾಗೆಯೇ ಅವಿದ್ಯೆ, ಮೂಢಾಚರಣೆ, ಅರ್ಥರಾಹಿತ್ಯಗಳಿಂದ ಇತಿಹಾಸ ಘಟಿಸುತ್ತಲೇ ಇರುತ್ತದೆ. ಅವೆಲ್ಲಾ ನಮ್ಮ ಇಂದಿನ ಜೀವನಕ್ಕೆ ನೇರವಾಗಿ ಮೌಲ್ಯಗಳನ್ನೊದಗಿಸುವುದಿಲ್ಲ. ಅವು ಬರುವುದು ಕವಿ-ಕಲಾಕಾರನ ವೈಯಕ್ತಿಕ ಪ್ರತಿಭೆಯಿಂದ. ಅಭಿನಂದಿಸಬೇಕಾದುದು ಅಥವಾ ಖಂಡಿಸಬೇಕಾದುದು ಅದನ್ನೇ ಹೊರತು ಇತಿಹಾಸವನ್ನಲ್ಲ.

–ಆರ್.ಕೆ. ದಿವಾಕರ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry