ಮಂಗಳವಾರ, ಆಗಸ್ಟ್ 11, 2020
24 °C

ಚಲಿಸುತ್ತಿದ್ದ ಟೆಂಪೊದ ಆ್ಯಕ್ಸೆಲ್ ತುಂಡು: ಚಾಲಕ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಲಿಸುತ್ತಿದ್ದ ಟೆಂಪೊದ ಆ್ಯಕ್ಸೆಲ್ ತುಂಡು: ಚಾಲಕ ಪಾರು

ಬೆಂಗಳೂರು: ವಿಮಾನನಿಲ್ದಾಣ ರಸ್ತೆಯಲ್ಲಿ (ಎತ್ತರಿಸಿದ ರಸ್ತೆ) ಯಲಹಂಕದ ಹುಣಸಮಾರನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಚಲಿಸುತ್ತಿದ್ದ ಟೆಂಪೊದ ಆ್ಯಕ್ಸೆಲ್ ತುಂಡಾಗಿ ಹಿಂಬದಿಯ ಚಕ್ರಗಳು ಕಳಚಿಕೊಂಡವು.

ಟೆಂಪೊ ಅಡ್ಡಾದಿಡ್ಡಿಯಾಗಿ ಚಲಿಸಿತು. ಚಕ್ರಗಳು ವಾಹನದಿಂದ ಬೇರ್ಪಟ್ಟು ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ವಾಹನಗಳತ್ತ ನುಗ್ಗಿದವು. ಈ ಅನಿರೀಕ್ಷಿತ ಘಟನೆಯಿಂದಾಗಿ ವಾಹನ ಸವಾರರು ಆತಂಕಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಚಾಲಕ ಉಮೇಶ್, ಟೆಂಪೊದಲ್ಲಿ (ಕೆ.ಎ–03 3514 ವಾಹನದ ನೋಂದಣಿ ಸಂಖ್ಯೆ) ಕಲ್ಲುಗಳನ್ನು ತುಂಬಿಕೊಂಡು ನಗರದ ಕಡೆಗೆ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.

‘ಚಕ್ರಗಳು ಕಳಚಿದ್ದರಿಂದ ವಾಹನದ ಹಿಂಭಾಗವು ನೆಲವನ್ನು ಸ್ಪರ್ಶಿಸಿತು. ಈ ವೇಳೆ ಅದರಲ್ಲಿದ್ದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದವು. ಅವಘಡದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ. ಬಳಿಕ ಕ್ರೇನ್ ತರಿಸಿಕೊಂಡು ಟೆಂಪೊವನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟೆವು’ ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.