ಶನಿವಾರ, ಜೂಲೈ 11, 2020
28 °C

ಹಾಲಹಳ್ಳಕ್ಕೆ ನೀರು ಹರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ: ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿಯ ಜಾತ್ರೆಯು ಜ.25ರಿಂದ ಒಂದು ತಿಂಗಳು ವಿಜೃಂಭಣೆಯಿಂದ ನಡೆಯ ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿ ಸಲಿದ್ದಾರೆ. ಭಕ್ತರು ಹಾಲಹಳ್ಳದಲ್ಲಿ ಸ್ನಾನ ಮಾಡಿ ಮಡಿಯುಟ್ಟು ದೇವಿಯ ದರ್ಶನ ಮಾಡುವುದು ವಾಡಿಕೆ. ಆದರೆ, ಸದ್ಯ ನೀರಿನ ಹರಿವು ಇಲ್ಲದೇ ಹಳ್ಳದಲ್ಲಿ ಪಾಚಿ ಬೆಳೆದಿದೆ.

‘ಜಾತ್ರೆಗೆ ಮಹಾರಾಷ್ಟ್ರ, ಗೋವಾ, ಆಂಧ್ರ, ದೆಹಲಿ, ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುವ ಸಾಧ್ಯತೆ ಇದೆ. ಆದರೆ, ನೀರಿನ ಸಮಸ್ಯೆ ಉಂಟಾಗುವ ಭೀತಿ ಗ್ರಾಮಸ್ಥರಲ್ಲಿದೆ. ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ಮಾಯಕ್ಕಾ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಯಲ್ಲಪ್ಪ ಮಲಾಜುರೆ ಒತ್ತಾಯಿಸಿದ್ದಾರೆ.

‘ಸಮೀಪ ಗ್ರಾಮಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಭಕ್ತರು ಕಾಲ್ನಡಿಗೆ, ಎತ್ತಿನ ಗಾಡಿಗಳಲ್ಲಿ ಬರುತ್ತಾರೆ. ಅವರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಶುಕ್ರವಾರ ತಾಲ್ಲೂಕ ಆಡಳಿತ ಜೊತೆಗೆ ಚರ್ಚೆ ನಡೆಸಲಾಗಿದೆ’ ದೇವಸ್ಥಾನ ಕಮಿಟಿ ನಿರ್ದೇಶಕ ಮಹೇಶ ಖೊಂಬೆನ್ನರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.