ಗುರುವಾರ , ಆಗಸ್ಟ್ 13, 2020
26 °C

ಚಾಂಪಿಯನ್ನರಿಗೆ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

ಚಾಂಪಿಯನ್ನರಿಗೆ ಆಘಾತ

ಲಖನೌ: ಕೊನೆಯ ಪಂದ್ಯದಲ್ಲಿ ಅಮೋಘ ಆಟ ಆಡಿದ ಡೆಲ್ಲಿ ಡ್ಯಾಷರ್ಸ್ ತಂಡದವರು ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸ್ಮಾಷರ್ಸ್‌ ತಂಡವನ್ನು ಮಣಿಸಿದರು. ಗ್ಯಾಬ್ರಿಯೆಲ್‌ ಅಡ್‌ಕಾಕ್ ಹಿಂಗಾಲಿನ ಗಾಯಕ್ಕೆ ಒಳಗಾದ ಕಾರಣ ಚೆನ್ನೈ ತಂಡ ಸೋಲೊಪ್ಪಿಕೊಳ್ಳಬೇಕಾಯಿತು.

ಮೊದಲ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ–ವೈ ಲೀ ಜೋಡಿ 15–13, 15–11ರಲ್ಲಿ ಇವಾನೊವ್ ಮತ್ತು ಸೊಜೊನೊವ್ ಜೋಡಿಯನ್ನು ಸೋಲಿಸಿ ಚೆನ್ನೈಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ನಂತರದ ಪಂದ್ಯದಲ್ಲಿ ಕೆ.ವಿನ್ಸಂಟ್‌ 15–10, 15–13ರಲ್ಲಿ ಲೆವರ್ಡೆಜ್‌ ವಿರುದ್ಧ ಗೆದ್ದು ತಿರುಗೇಟು ನೀಡಿದರು.

ಮೂರನೇ ಪಂದ್ಯದಲ್ಲೂ ಡೆಲ್ಲಿ ಪಾರಮ್ಯ ಮೆರೆಯಿತು. ಟಿ ಹವೊಯ್‌ 15–10, 15–14ರಲ್ಲಿ ಸೈನ್ಸೊಂಬೊನ್ಸುಕ್‌ ಎದುರು ಗೆದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕೂಡ ಸೋಲುವುದರೊಂದಿಗೆ ಚೆನ್ನೈಆಸೆ ಕಮರಿತು. ಕೊರಿಯಾದ ಸಂಗ್ ಜಿ ಹ್ಯೂನ್‌ 11–15, 15–13, 15–14ರಿಂದ ಸಿಂಧು ಅವರನ್ನು ಮಣಿಸಿ ಡೆಲ್ಲಿ ಡ್ಯಾಷರ್ಸ್‌ ಜಯ ಖಚಿತಪಡಿಸಿದರು.

ಟ್ರಂಪ್ ಪಂದ್ಯದಲ್ಲಿ ಅಡ್‌ಕಾಕ್ ದಂಪತಿ ಗ್ಯಾಬ್ರಿಯೆಲ್‌ ಮತ್ತು ಕ್ರಿಸ್‌ ವಿರುದ್ಧ ಅಶ್ವಿನಿ ‍ಪೊನ್ನಪ್ಪ ಮತ್ತು ಇವಾನೊವ್‌ ಗೆದ್ದು ತಂಡದಲ್ಲಿ ಸಂಭ್ರಮ ಮೂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.