ಶನಿವಾರ, ಜೂಲೈ 4, 2020
21 °C

ಮಿಗ್‌ ಯುದ್ಧವಿಮಾನ ಅಪಘಾತ, ಪೈಲಟ್‌ ಪಾರು

ಪಿಟಿಐ Updated:

ಅಕ್ಷರ ಗಾತ್ರ : | |

ಮಿಗ್‌ ಯುದ್ಧವಿಮಾನ ಅಪಘಾತ, ಪೈಲಟ್‌ ಪಾರು

ಪಣಜಿ: ಭಾರತೀಯ ನೌಕಾಪಡೆಗೆ ಸೇರಿದ ‘ಮಿಗ್ 29ಕೆ’ ಯುದ್ಧವಿಮಾನ ಗೋವಾ ನೌಕಾ ನೆಲೆಯ ರನ್‌ವೇಯಲ್ಲಿ ಬುಧವಾರ ಅಡ್ಡಾದಿಡ್ಡಿ ಚಲಿಸಿದ್ದರಿಂದ ಅಪಘಾತಕ್ಕೀಡಾಗಿದೆ.

ನೌಕಾಪಡೆಗೆ ಮಿಗ್ 29ಕೆ ಯುದ್ಧವಿಮಾನ ಸೇರ್ಪಡೆಯ ನಂತರ ಸಂಭವಿಸಿದ ಮೊದಲ ಅಪಘಾತ ಇದಾಗಿದೆ. ಪೈಲಟ್‌ ಅಪಾಯದಿಂದ ಪಾರಾಗಿದ್ದಾರೆ.

‘ಸಂಚಾರ ಆರಂಭಿಸಿದಾಗ ವಿಮಾನದಲ್ಲಿನ ತೊಂದರೆಯಿಂದಾಗಿ ಅಪಘಾತ ಆಗಿದೆ. ಇದರಿಂದ ವಿಮಾನದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತ್ತು’ ಎಂದು ಗೋವಾ ಪ್ರಾದೇಶಿಕ ವಾಯು ನೆಲೆಯ ಸೇನಾಧಿಕಾರಿ ಪುನೀತ್ ಬೇಹ್ಲ್ ತಿಳಿಸಿದ್ದಾರೆ.

‘ಅಪಘಾತಕ್ಕೆ ತಾಂತ್ರಿಕ ದೋಷ ಅಥವಾ ಪೈಲಟ್‌ನ ತಪ್ಪು ಕಾರಣವೇ ಎಂಬುದನ್ನು ಈಗಲೇ ಹೇಳಲಾಗದು. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ನಂತರವೇ ನಿಖರವಾದ ಕಾರಣ ತಿಳಿದು ಬರಲಿದೆ’ ಎಂದೂ ಅವರು ತಿಳಿಸಿದ್ದಾರೆ.

ಗೋವಾ ವಿಮಾನನಿಲ್ದಾಣ ವಾಯುನೆಲೆಯ ಒಳಭಾಗದಲ್ಲಿ ಇದೆ. ‘ಘಟನೆಯಿಂದಾಗಿ ವಿಮಾನನಿಲ್ದಾಣದಿಂದ ಹೊರಡುವ ಮತ್ತು ಇಲ್ಲಿಗೆ ಬರುವ ನಾಗರಿಕ ವಿಮಾನಗಳ ಸಂಚಾರದಲ್ಲಿ ಒಂದು ತಾಸು ಹತ್ತು ನಿಮಿಷ ವ್ಯತ್ಯಯವಾಯಿತು’ ಎಂದು ನಿಲ್ದಾಣದ ನಿರ್ದೇಶಕ ಬಿ.ಸಿ.ಎಚ್.ನೇಗಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.