ಆ್ಯಷಸ್‌: ಅಂತಿಮ ಪಂದ್ಯ ಇಂದಿನಿಂದ

7

ಆ್ಯಷಸ್‌: ಅಂತಿಮ ಪಂದ್ಯ ಇಂದಿನಿಂದ

Published:
Updated:
ಆ್ಯಷಸ್‌: ಅಂತಿಮ ಪಂದ್ಯ ಇಂದಿನಿಂದ

ಸಿಡ್ನಿ, ಆಸ್ಟ್ರೇಲಿಯಾ: ಇಂಗ್ಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವಿನ ಆ್ಯಷಸ್ ಸರಣಿಯ ಕೊನೆಯ ಪಂದ್ಯ ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿದೆ.

‌ಮೊದಲ ಮೂರು ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾ ಸರಣಿ ಕೈವಶ ಮಾಡಿಕೊಂಡಿದೆ. ನಾಲ್ಕನೇ ಪಂದ್ಯದಲ್ಲಿ ಸಮರ್ಥ ತಿರುಗೇಟು ನೀಡಿದ ಇಂಗ್ಲೆಂಡ್‌ ಗೆಲುವಿನ ಕನಸು ಕಂಡಿತ್ತು. ಆದರೆ ಮಳೆ ಕಾಡಿದ ಕಾರಣ ಆ ತಂಡದ ಕನಸು ನನಸಾಗಲಿಲ್ಲ. ಅಂತಿಮ ದಿನ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅಮೋಘ ಶತಕ ಸಿಡಿಸಿದ್ದರು.

ಅಂತಿಮ  ಪಂದ್ಯದಲ್ಲಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಲು ಆತಿಥೇಯರು ಪ್ರಯತ್ನಿಸಲಿದ್ದು ಇಂಗ್ಲೆಂಡ್‌ಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry