ಟೆನಿಸ್‌: ರಾಮಕುಮಾರ್‌, ಯೂಕಿಗೆ ನಿರಾಸೆ

5

ಟೆನಿಸ್‌: ರಾಮಕುಮಾರ್‌, ಯೂಕಿಗೆ ನಿರಾಸೆ

Published:
Updated:

ಪುಣೆ: ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯಲ್ಲಿ ಭಾರತದ ರಾಮಕುಮಾರ್‌ ರಾಮನಾಥನ್‌ ಮತ್ತು ಯೂಕಿ ಭಾಂಬ್ರಿ ಅವರ ಹೋರಾಟ ಅಂತ್ಯಗೊಂಡಿದೆ.

ಬಾಲೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ರಾಮಕುಮಾರ್‌ 4–6, 3–6ರಲ್ಲಿ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ವಿರುದ್ಧ ‍ಪರಾಭವಗೊಂಡರು.

2014ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಿಲಿಕ್‌ಗೆ ಎರಡೂ ಸೆಟ್‌ಗಳಲ್ಲಿ ಪ್ರಬಲ ಪೈಪೋಟಿದ ನೀಡಿದ ರಾಮಕುಮಾರ್‌ ಸೋಲಿನ ನಡುವೆಯೂ ಗಮನ ಸೆಳೆದರು.

ಭಾಂಬ್ರಿ 6–4, 3–6, 4–6ರಲ್ಲಿ ಎಂಟನೇ ಶ್ರೇಯಾಂಕಿತ ಆಟಗಾರ ಪಿಯೆರೆ ಹ್ಯೂಸ್‌ ಹರ್ಬರ್ಟ್‌ ಎದುರು ಸೋತರು.

ಟೂರ್ನಿಯ ಇತರ ಪಂದ್ಯಗಳಲ್ಲಿ ರಾಬಿನ್‌ ಹಾಸ್‌ 3–6, 7–6, 7–5ರಲ್ಲಿ ನಿಕೊಲಸ್‌ ಜೆರ‍್ರಿ ಎದುರೂ, ಬೆನೊಯಿಟ್‌ ಪಿಯೆರ್‌ 4–6, 7–6, 7–6ರಲ್ಲಿ ಮಾರ್ಟನ್‌ ಫಕ್ಸೊವಿಕ್ಸ್‌ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry