ಮಂಗಳವಾರ, ಆಗಸ್ಟ್ 4, 2020
22 °C

ಸಾರಾಗೆ ಐಶ್ವರ್ಯಾ ರೈ ಸ್ಫೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಾಗೆ ಐಶ್ವರ್ಯಾ ರೈ ಸ್ಫೂರ್ತಿ

ಮಕ್ಕಳಿಗೆ ಅಪ್ಪ ಸ್ಫೂರ್ತಿ ಆಗುವುದು ಮಾಮೂಲು. ಆದರೆ ಸೈಫ್‌ ಅಲಿ ಖಾನ್‌ ಅವರ ಮಗಳು ಸಾರಾ ಅಲಿ ಖಾನ್‌ಗೆ ಸಿನಿಮಾ ಕ್ಷೇತ್ರಕ್ಕೆ ಬರಲು ಐಶ್ವರ್ಯ ರೈ ಸ್ಫೂರ್ತಿಯಂತೆ. ಈ ವಿಷಯವನ್ನು ಸ್ವತಃ ಸೈಫ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸಾರಾ ಸದ್ಯ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ‘ಕೇದಾರನಾಥ’ ಎನ್ನುವ ಚಿತ್ರದಲ್ಲಿ ಅಭಿನಯಿಸುವ ತಯಾರಿಯಲ್ಲಿದ್ದಾರೆ. ಚಿತ್ರ  ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

‘ಆಗ ಸಾರಾಗೆ ನಾಲ್ಕು ವರ್ಷವಿರಬಹುದು. ನ್ಯೂಯಾರ್ಕ್‌ನ ವೇದಿಕೆಯೊಂದರಲ್ಲಿ ನಡೆದು ಹೋಗುತ್ತಿದ್ದ ಐಶ್ವರ್ಯಾ ಅವರನ್ನು ಅಭಿಮಾನಿಗಳು ಹಿಂಬಾಲಿಸುತ್ತಿದ್ದರು. ಸಭಾಂಗಣದಲ್ಲಿ ಕುಳಿತಿದ್ದ ಸಾರಾ ಮುಂದೊಂದು ದಿನ ನಾನೂ ಹೀಗೆ ಆಗಬೇಕು ಎಂದಿದ್ದಳು. ಅದೇ ಆಸೆಯನ್ನು ಕಾಪಿಟ್ಟುಕೊಂಡು ಇಂದು ಸಿನಿಲೋಕಕ್ಕೆ ಕಾಲಿರಿಸಿದ್ದಾಳೆ. ಅವಳಿಗೆ ಎಲ್ಲವೂ ಶುಭವಾಗಲಿ’ ಎಂದು ಹಾರೈಸಿದ್ದಾರೆ ಸೈಫ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.